×
Ad

ಸೌದಿ: ಹೈಸ್ಪೀಡ್ ರೈಲಿನಲ್ಲಿ ಬೆಂಕಿ ಆಕಸ್ಮಿಕ

Update: 2019-09-29 23:23 IST

ರಿಯಾದ್,ಸೆ.29: ಸೌದಿ ಅರೇಬಿಯದ ಜಿದ್ದಾದಲ್ಲಿ ಹೈಸ್ಪೀಡ್ ರೈಲೊಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವುದಾಗಿ, ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇಸ್ಲಾಮಿನ ಪವಿತ್ರ ಸ್ಥಳಗಳಾದ ಮಕ್ಕಾ ಹಾಗೂ ಮದೀನಾಗಳ ನಡುವೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಳೆದ ವರ್ಷ ಸಾರ್ವಜನಿಕರಿಗಾಗಿ ಹರಾಮೈನ್ ಹೈಸ್ಪೀಡ್ ರೈಲು ವ್ಯವಸ್ಥೆಯನ್ನು ಸಮರ್ಪಿಸಲಾಗಿತ್ತು.

  ‘ರವಿವಾರ ಸ್ಥಳೀಯ ಕಾಲಮಾನ 12: 35ರ ವೇಳೆಗೆ ಸುಲೇಮಾನಿಯಾ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸಲು ನಾಗರಿಕ ರಕ್ಷಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಈ ತನಕ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಗಳು ಬಂದಿಲ್ಲ’ ಎಂದು ಸೌದಿ ನಾಗರಿಕ ರಕ್ಷಣಾ ಮಹಾನಿರ್ದೇಶನಾಲಯವು ಟ್ವೀಟ್ ಮಾಡಿದೆ.

 ಮಕ್ಕಾದ ಪ್ರಾಂತೀಯ ಸರಕಾರವು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ರೈಲ್ವೆ ಸಂಕೀರ್ಣವೊಂದರೊಳಗಿನಿಂದ ಭಾರೀ ಪ್ರಮಾಣದ ಹೊಗೆ ಹೊರಹೊಮ್ಮುತ್ತಿರುವುದು ಕಂಡುಬಂದಿದೆ.

 ಹರಾಮೈನ್ ಹೈಸ್ಪೀಡ್ ರೈಲು ಜಾಲವು ಜಿದ್ದಾದ ಕೆಂಪು ಸಮುದ್ರ ಬಂದರು ಪ್ರದೇಶದ ಮೂಲಕ ತಾಸಿಗೆ 300 ಕಿ.ಮೀ. ವೇಗದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತದೆ. ಸೌದಿ ದೊರೆ ಸಲ್ಮಾನ್ 2018ರ ಸೆಪ್ಟೆಂಬರ್‌ನಲ್ಲಿ ಈ ರೈಲ್ವೆ ಜಾಲವನ್ನು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News