ದಸರಾ ಹಬ್ಬಕ್ಕೆ ಬೆಂಗಳೂರು-ಕಾರವಾರ ನಡುವೆ ವಿಶೇಷ ರೈಲು
Update: 2019-09-30 18:40 IST
ಉಡುಪಿ, ಸೆ. 30: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ಮಂಗಳೂರಿಗೆ ಘೋಷಿಸಿದ್ದ ವಿಶೇಷ ರೈಲನ್ನು ಸಂಸದೆ ಶೋಭಾ ಕರಂದ್ಲಾಜೆ ಅವರ ಕೋರಿಕೆಯ ಮೇರೆಗೆ ಉಡುಪಿ-ಕುಂದಾಪುರದ ಜನರಿಗೆ ಸಹಾಯಕವಾಗುವಂತೆ ಕಾರವಾರ ದವರೆಗೆ ವಿಸ್ತರಿಸಲು ಕೊಂಕಣ ರೈಲ್ವೆ ಒಪ್ಪಿಕೊಂಡಿದೆ.
ದಸರಾ ಹಬ್ಬದ ಸಮಯದಲ್ಲಿ ಖಾಸಗಿ ಬಸ್ ದರಗಳು ಭಾರೀ ಹೆಚ್ಚಳವಾಗುವುದರಿಂದ,ಉಡುಪಿ- ಕುಂದಾಪುರದ ಭಾಗದ ಜನರಿಗೆ ಸಹಾಯ ವಾಗುವ ನಿಟ್ಟಿನಲ್ಲಿವಿಶೇಷ ರೈಲಿಗೆ ಸಂಸದರು ಬೇಡಿಕೆಯಿರಿಸಿದ್ದರು.ಇದರಂತೆ ಭಾರತೀಯ ರೈಲ್ವೇ ಎರಡು ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ.
ಬೆಂಗಳೂರು-ಕಾರವಾರದ ನಡುವೆ ಓಡುವ ಈ ರೈಲಿನ ವೇಳಾ ಪಟ್ಟಿ ಹೀಗಿದೆ. ಬೆಂಗಳೂರಿನಿಂದ ಆ.4ರ ರಾತ್ರಿ 10:20ಕ್ಕೆ ಹಾಗೂ ಆ.7ರ ರಾತ್ರಿ 11:55ಕ್ಕೆ. ಕಾರವಾರದಿಂದ ಆ.5ರ ಸಂಜೆ 5:00ಕ್ಕೆ ಹಾಗೂ ಆ.8ರ ಸಂಜೆ 5 ಕ್ಕೆ. ಈ ಎರಡು ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಂಸದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.