ಮೊಬೈಲ್, ಕಾಣಿಕೆ ಡಬ್ಬಿ ಕಳವು
Update: 2019-09-30 22:00 IST
ಬೈಂದೂರು, ಸೆ.30: ಕೆರ್ಗಾಲು ಗ್ರಾಮದ ರಕ್ತೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಸೆ.30ರಂದು ನುಸುಕಿನ ವೇಳೆ ದೇವಸ್ಥಾನದ ಅಂಗಳದಲ್ಲಿ ಮಲಗಿದ್ದ ಮೂವರ ಮೊಬೈಲ್ ಹಾಗೂ ದೇವಳದ ಕಾಣಿಕೆ ಡಬ್ಬಿ ಕಳವಾಗಿರುವ ಘಟನೆ ನಡೆದಿದೆ.
ದೇವಳದ ಪೂಜಾ ಕಾರ್ಯಕ್ರಮ ನಡೆದ ನಂತರ ಗೋಪಾಲ ದೇವಾಡಿಗ, ರೋಹಿತ್, ಸತೀಶ್ ದೇವಸ್ಥಾನದ ಅಂಗಳದಲ್ಲಿ ಮಲಗಿದ್ದು, ಈ ವೇಳೆ ಕಳ್ಳರು ಮಲಗಿದ್ದ ಮೂವರ ತಲೆ ಬಳಿ ಇರಿಸಿದ್ದ ಮೊಬೈಲ್ ಹಾಗೂ ದೇವಸ್ಥಾನದ ಎದುರುಗಡೆ ಇರಿಸಿದ್ದ ಕಾಣಿಕೆ ಡಬ್ಬವನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತು ಗಳ ಒಟ್ಟು ಮೌಲ್ಯ 28,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.