×
Ad

ಬ್ರಹ್ಮೋಸ್ ಸೂಪರ್‌ ಸೋನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Update: 2019-09-30 22:01 IST

ಬಾಲಸೋರ್,ಸೆ.30: ಭೂಮಿಯಿಂದ ಮತ್ತು ಸಮುದ್ರದಿಂದ ಹಾರಿಸಬಲ್ಲ ಬ್ರಹ್ಮೋಸ್ ಸೂಪರ್‌ಸೋನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಒಡಿಶಾದ ಬಾಲಸೋರ್ ಜಿಲ್ಲೆಯ ಚಾಂದಿಪುರ್ ಕರಾವಳಿಯಲ್ಲಿ ನಡೆಸಲಾಯಿತು.

 ಪರೀಕ್ಷೆಯಲ್ಲಿ ಕ್ಷಿಪಣಿಯು ಎಲ್ಲ ಮಾನದಂಡಗಳನ್ನು ಪೂರೈಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪರೀಕ್ಷೆಗೊಳಪಟ್ಟ ಕ್ಷಿಪಣಿ 290ಕಿ.ಮೀ ವ್ಯಾಪ್ತಿವರೆಗೆ ದಾಳಿ ನಡೆಸಬಹುದಾಗಿದೆ. ಡಿಆರ್‌ಡಿಒ ಮತ್ತು ರಶ್ಯಾದ ಎನ್‌ಪಿಒಎಂ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯ ಮೊದಲ ವಿಸ್ತೃತ ಮಾದರಿಯನ್ನು 2017ರ ಮಾರ್ಚ್ 11ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News