ಕೆಸಿಎಫ್ ದುಬೈ ನಾರ್ತ್ ರೆನ್ ಮೀಲಾದ್ ಸ್ವಾಗತ ಸಮಿತಿ ರಚನೆ
Update: 2019-09-30 22:18 IST
ಮಂಗಳೂರು, ಸೆ.30: ಕೆಸಿಎಫ್ ದುಬೈ ನಾರ್ತ್ ರೆನ್ ವತಿಯಿಂದ ನವೆಂವರ್ 22ರಂದು ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್‌ರ ನೇತೃತ್ವದಲ್ಲಿ ನಡೆಯುವ ಗ್ರ್ಯಾಂಡ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
ಕೆಸಿಎಫ್ ದುಬೈ ನಾರ್ತ್ ಸಮಿತಿಯ ಅಧ್ಯಕ್ಷ ಇಸ್ಮಾಯೀಲ್ ಮದನಿನಗರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಉದ್ಘಾಟಿಸಿದರು.
ಕೆಸಿಎಫ್ ದುಬೈ ನಾರ್ತ್ ರೆನ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಲತೀಫಿ ಮಾತನಾಡಿದರು. ಮೀಲಾದ್ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹೀಂ ಮದನಿ, ಸಂಚಾಲಕರಾಗಿ ಬಶೀರ್ ಪಡುಬಿದ್ರೆ, ಸಹ ಸಂಚಾಲಕರಾಗಿ ಹಂಝ ಎರ್ಮಾಡ್, ಆರ್ಥಿಕ ಮುಖ್ಯಸ್ಥರಾಗಿ ಅನ್ವರ್ ನೆಲ್ಲಿಕುನ್ನು ಆರಿಸಲಾಯಿತು. ಅಲ್ಲದೆ ವಿವಿಧ ಸಮಿತಿಯನ್ನು ರಚಿಸಲಾಯಿತು.
ಸಭೆಯನ್ನು ಕೆಸಿಎಫ್ ದುಬೈ ನಾರ್ತ್ ರೆನ್ ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಏರುಮಾಡ್ ಸ್ವಾಗತಿಸಿದರು.