×
Ad

ಅ.2: ಮೇಲ್ತೆನೆ ಸಾಹಿತ್ಯ ಕೂಟ

Update: 2019-09-30 22:32 IST

ಮಂಗಳೂರು, ಸೆ.30: ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಅ.2ರಂದು ಸಂಜೆ 4 ಗಂಟೆಗೆ ದೇರಳಕಟ್ಟೆಯ ಚಿಂತನಾ ಗ್ರಂಥಾಲಯದಲ್ಲಿ ಬ್ಯಾರಿ ಸಾಹಿತ್ಯ ಕೂಟ ನಡೆಯಲಿದೆ.

ಬೆಳ್ಮ ರೆಂಜಾಡಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಹಿದಾಯತುಲ್ಲಾ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ಹಾಜಿ ಮುಹಮ್ಮದ್ ತ್ವಾಹಾ, ಲೇಖಕ ಫಾರೂಕ್ ಉಳ್ಳಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸುವರು.

ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ‘ಮೇಲ್ತೆನೆ’ ಆಯೋಜಿಸಿದ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಶಮೀಮಾ ಕುತ್ತಾರ್, ಇಬ್ರಾಹೀಂ ಬಾತಿಷ್ ಗೋಳ್ತಮಜಲು, ಆಯಿಶತ್ ಸಫ್ವಾನಾ ಉಳ್ಳಾಲ ಬೈಲ್‌ಗೆ ಬಹುಮಾನ ವಿತರಿಸಲಾಗುತ್ತದೆ. ಅಲ್ಲದೆ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ರಫೀಕ್ ಕಲ್ಕಟ್ಟ, ಬಿ.ಎಂ.ಕಿನ್ಯ, ಶಅದ್ ಸಜಿಪ, ಕಬೀರ್ ಹಾಸನ, ಶರೀಫ್ ಕಾಡುಮಠ, ಅನ್ಸಾರ್ ಕಾಟಿಪಳ್ಳ, ಆಶೀರುದ್ದೀನ್ ಮಂಜನಾಡಿ, ಝೈನ್ ಎಂ.ಇನೋಳಿ ಕವನ ವಾಚಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News