ಮಾದಕ ದ್ರವ್ಯದ ವಿರುದ್ಧ ಜನ ಜಾಗೃತಿ ಅಭಿಯಾನ
Update: 2019-09-30 22:36 IST
ಮಂಗಳೂರು, ಸೆ.30: ದೇರಳಕಟ್ಟೆ ರೇಂಜಿಗೊಳಪಟ್ಟ ಉಚ್ಚಿಲ ರಹ್ಮಾನಿಯ ಹಾಗು ಹಯಾತುಲ್ ಇಸ್ಲಾಂ ಮದ್ರಸ. ಎಸ್ಕೆಎಸ್ಬಿವಿ ವಿದ್ಯಾರ್ಥಿಗಳಿಂದ ಲಹರಿ ಪದಾರ್ಥದ ವಿರುದ್ಧ ಜನ ಜಾಗೃತಿ ಅಭಿಯಾನವು ಶಾಲಾ ವಠಾರದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಹಾಫಿಲ್ ನಯೀಮಿ ಬೆಳ್ಮ ಮಾದಕ ದ್ರವ್ಯದ ಕುರಿತು ವಿಷಯ ಮಂಡಿಸಿದರು.
ಮದ್ರಸ ಸದರ್ ಅಧ್ಯಾಪಕ ಅಬ್ದುಲ್ ಅಝೀಝ್ ಮನ್ನಾನಿ, ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ, ಶಾಲಾ ಕರೆಸ್ಪಾಂಡಂಟ್ ಅಬ್ದುಸ್ಸಲಾಂ ಅವರು ಲಹರಿ ಪದಾರ್ಥ ಸೇವನೆ ಶರೀರಕ್ಕೆ ಹಾನಿಕರ ಎಂಬುದರ ಕುರಿತು ಮಾತಾಡಿದರು
ಆಡಳಿತ ಸಮಿತಿ ಕಾರ್ಯದರ್ಶಿ ಎಸ್.ಬಿ ಹನೀಫ್ ಖಜಾಂಚಿ ಮುಹಮ್ಮದ್ ಅಲೀ ಮದ್ರಸ ಹಾಗು ಶಾಲಾ ಅಧ್ಯಾಪಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.