ಡಬ್ಲೂ.ಪಿ.ಐ ಜಿಲ್ಲಾಧ್ಯಕ್ಷರಾಗಿ ಡಾ.ನಸೀಮ್ ಖಾನ್ ನೇಮಕ
Update: 2019-09-30 23:06 IST
ಭಟ್ಕಳ: ವೆಲ್ಫೇರ್ ಪಾರ್ಟಿ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರಾಗಿ ಶಿರಾಲಿಯ ವೈದ್ಯ ಡಾ.ನಸೀಮ್ ಖಾನ್ ಸೋಮವಾರ ಭಟ್ಕಳದಲ್ಲಿ ಜರಗಿದ ಜಿಲ್ಲಾ ಸಮಿತಿಯ ಸಭೆಯಲ್ಲಿ ನೇಮಕೊಂಡರು.
ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ನ್ಯಾಯಾವಾದಿ ತಾಹಿರ್ ಹುಸೇನ್ ವಹಿಸಿದ್ದರು. ಸಭೆಯಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಯಿತು. ಮುಂಬರುವ ದಿನಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಮೂಲಕ ಪಕ್ಷಕ್ಕೆ ಬಲವನ್ನು ತಂದು ಕೊಡಲಾಗುವುದು ಎಂದು ತಾಹಿರ್ ಹುಸೇನ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಕತೀಬ್, ಮಾಜಿ ಅಧ್ಯಕ್ಷ ಯುನೂಸ್ ರುಕ್ನುದ್ದೀನ್, ಸಾದಿಕ್ ನವೀದ್ ಶಾಬಂದ್ರಿ, ನಾಸಿರ್ ಹುಸೇನ್, ಅಬ್ದುಲ್ ಜಬ್ಬಾರ್ ಅಸದಿ, ಯುವ ಮುಖಂಡ ಅಬುಲ್ ಆಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.