ದ.ಕ.ಜಿಲ್ಲೆ: ಕಾಲೇಜುಗಳಿಗೆ ಅ. 1ರಿಂದ ದಸರಾ ರಜೆ
Update: 2019-09-30 23:08 IST
ಕೊಣಾಜೆ: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಟ್ಟಿರುವ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಸ್ನಾತಕ ಮತು ಸ್ನಾತಕೋತ್ತರ ಕೋರ್ಸುಗಳನ್ನು ನಡೆಸುತ್ತಿರುವ ಎಲ್ಲಾ ಸಂಯೋಜಿತ, ಸ್ವಾಯತ್ತ, ಘಟಕ ಕಾಲೇಜುಗಳಿಗೆ ಅ. 1ರಿಂದ 8ರವರೆಗೆ ದಸರಾ ಹಬ್ಬದ ಪ್ರಯುಕ್ತ ರಜೆ ಘೋಷಿಸಲಾಗಿದೆ ಎಂದು ಮಂಗಳೂರು ವಿವಿ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.