ಫೆಬ್ರವರಿ 7ರಿಂದ 16ರವರೆಗೆ ಕಾಜೂರು ಉರೂಸ್

Update: 2019-10-01 11:20 GMT

ಬೆಳ್ತಂಗಡಿ, ಅ.1: ಸರ್ವಧರ್ಮಿಯರ ಸಮನ್ವಯ ಕೇಂದ್ರವಾಗಿರುವ ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾ ಶರೀಫ್, ಉರೂಸ್ ಸಮಾರಂಭವು 2020ರ ಫೆ.7ರಿಂದ 16 ರವರೆಗೆ ಜರಗಲಿದೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಕರ್ನಾಟಕ ಹೈಕೋಟ್‌ರ್ನಲ್ಲಿದ್ದ ವಿವಾದವನ್ನು ಕಾಜೂರು ಮತ್ತು ಕಿಲ್ಲೂರು ಎರಡು ಜಮಾಅತ್ ನವರು ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲಾಗಿದೆ. ಕುಂಬೋಳ್ ತಂಙಳ್ ನೇತೃತ್ವದಲ್ಲಿ ದರ್ಗಾ ಶರೀಫ್ ವಠಾರದಲ್ಲಿ ಎರಡೂ ಜಮಾಅತರ ಸಮಕ್ಷಮ ನಾರಿಯತ್ ಸ್ವಲಾತ್ ನಡೆದಿದ್ದು, ಇದೇ ಸಂದರ್ಭ ಉರೂಸ್ ದಿನಾಂಕವನ್ನು ಘೋಷಿಸಿರುವುದಾಗಿ ಅವರು ತಿಳಿಸಿದರು.

ಖಾಝಿ ಸೈಯದ್ ಕೂರತ್ ತಂಙಳ್ ನೇತೃತ್ವದಲ್ಲಿ ನಡೆಯಲಿರುವ ಉರೂಸ್ ಕಾರ್ಯಕ್ರಮದಲ್ಲಿ ಪ್ರತಿದಿನ ರಾತ್ರಿ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ನಡೆಯಲ್ಲಿದೆ. ಉರೂಸ್‌ನ 7ನೇ ದಿನ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 16ರಂದು ಸಂಜೆ ಸರ್ವಧರ್ಮಿಯರ ಸೌಹಾರ್ದ ಸಂಗಮ ನಡೆಯಲ್ಲಿದೆ ಎಂದರು.

ಉರೂಸ್ ಸಮರೋಪಕ್ಕೆ ಅಖಿಲ ಭಾರತ ಸುನ್ನೀ ವಿದ್ವಾಂಸ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಎ.ಪಿ.ಉಸ್ತಾದ್ ಕಾಂತಪುರಂ ಮುಖ್ಯಭಾಷಣಗೈಯಲಿದ್ದಾರೆ. ಖಾಝಿ ಸೈಯದ್ ಕೂರತ್ ತಂಙಳ್ ಸಮಾರಂಭ ಉದ್ಘಾಟಿಸುವರು. ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕಂಬೋಳ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಜೂರು ಉರೂಸ್ ಸಮಿತಿಯ ಉಪಾಧ್ಯಕ್ಷ ಕೆ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಜೆ.ಎಚ್., ಕಾರ್ಯದರ್ಶಿ ಎಂ.ಎ.ಕಾಸಿಂ ಮಲ್ಲಿಗೆ ಮನೆ, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಸದಸ್ಯರಾದ ಅಬೂಬಕರ್ ಮಲ್ಲಿಗೆ ಮನೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News