ಬಜ್ಪೆ: ರಸ್ತೆಯ ಬದಿಗಳಲ್ಲಿ ತ್ಯಾಜ್ಯದ ರಾಶಿ

Update: 2019-10-01 17:18 GMT

ಬಜ್ಪೆ:  ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯ ಅಂಬಿಕಾ ನಗರದ ಸಮೀಪ  ರಾಜ್ಯ ಹೆದ್ದಾರಿಯ  ರಸ್ತೆಯ  ಬದಿಗಳಲ್ಲಿ ತ್ಯಾಜ್ಯದ ರಾಶಿ,  ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ತುಂಬಿಹೋಗಿ ಗಬ್ಬು ನಾಥ ಬೀರುತ್ತಿದೆ.

ಸ್ವಚ್ಚತೆಗಾಗಿ ಇಲ್ಲಿನ  ಗ್ರಾಮ ಪಂಚಾಯತ್ ಅನೇಕ  ಕ್ರಮಗಳನ್ನು  ಕೈಗೊಂಡರೂ ರಸ್ತೆ ಬದಿ ತ್ಯಾಜ್ಯ ಬಿಸಾಡುವುದರಿಂದ ತ್ಯಾಜ್ಯ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಲ್ಲಿ  ರಸ್ತೆ ಬದಿಯಲ್ಲಿ ಮೂಟೆಮೂಟೆಗಳಲ್ಲಿ ತ್ಯಾಜ್ಯಗಳು ಬಿದ್ದಿದ್ದು, ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಕಸ ತ್ರಾಜ್ಯವು ಕೊಳೆತು ದುರ್ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ಸಂಚಾರಿಸುವಂತಹ ವಾಹನಿಗರು ಮೂಗು ಮುಚ್ಚಿಕೊಂಡೆ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಮಳೆ ಬಂದರೆ ಈ ತ್ಯಾಜ್ಯಗಳು ಈ ಪ್ರದೇಶದ ಕೃಷಿ ಗದ್ದೆಗಳಿಗೆ ಹರಿದು ಹೋಗುತ್ತಿದೆ  ಎಂದು ಇಲ್ಲಿನ ಕೃಷಿಕರು ಹೇಳುತ್ತಿದ್ದಾರೆ .ಅಲ್ಲದೆ ಈ ಪ್ರದೇಶದಲ್ಲಿನ ಕೃಷಿ ಚಟುವಟಿಕೆಗೂ  ತೊಂದರೆ ಯಾಗಿದೆ  ಎನ್ನುತ್ತಾರೆ ಇಲ್ಲಿನ ಕೃಷಿಕರು. ಪಡುಪೆರಾರ ಗ್ರಾ.ಪಂ.  ನಿಂದ  ಈ ಪ್ರದೇಶದಲ್ಲಿ ತ್ಯಾಜ್ಯ ಬಿಸಾಡುವವರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ನಾಮ ಫಲಕ ಹಾಕಿದರೂ ಪ್ರಯೋಜನವಾಗಿಲ್ಲ. ಅದರೆ ತ್ಯಾಜ್ಯ ತಂದು ಹಾಕುತ್ತಿರುವುದು ಮಾತ್ರ ಎಂದಿ ನಂತೆ ಮುಂದುವರಿದಿದೆ.

ಆದರೆ ವಾಹನಗಳಲ್ಲಿ ಬಂದು ಕೆಲವರು ಈ ಭಾಗದಲ್ಲಿ ಕಸ ಬಿಸಾಡಿ ಹೋಗುವ ಪದ್ಧತಿ ಈಗಲೂ ಮುಂದುವರಿದಿದೆ.ಈ ಬಗ್ಗೆ ಸಾರ್ವಜನಿಕರು ದೂರು ನೀಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ  ಕಸ ತಂದು ಬಿಸಾ ಡು ವವರ ವಿರುದ್ಧ ಕ್ರಮ ಕೈಗೊಳ್ಳಲು ಪಡುಪೆರಾರ  ಗ್ರಾಮ ಪಂಚಾಯತ್‌ ಜಾಗೃತರಾಗಬೇಕಾಗಿದೆ. ವಾಹನದಲ್ಲಿ ಬಂದು ತ್ಯಾಜ್ಯ ಬಿಸಾಡದಂತೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ.  ಈ ಬಗ್ಗೆ ಕಟ್ಟುನಿ ಟ್ಟಿನ ಕ್ರಮಕೈಗೊಳ್ಳಬೇಕು. ಈ ಪ್ರದೇಶದಲ್ಲಿ ಸಿಸಿ ಕೆಮರಾ ಅಳವಡಿಸಲು ಚಿಂತನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News