ಅರಿತೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬ್ರಹ್ಮಕಲಶ
ಉಡುಪಿ, ಅ.2: ಶ್ರೀಸೋದೆ ವಾದಿರಾಜ ಮಠಕ್ಕೆ ಒಳಪಟ್ಟ ಅರಿತೋಡು ಶ್ರೀಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಶಿಥಿಲಗೊಂಡ ಗರ್ಭಗುಡಿಗೆ ತಾಮ್ರದ ಹೊದಿಕೆ ಸಹಿತ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶವನ್ನು 2020ರ ಫೆಬ್ರವರಿ ತಿಂಗಳಲ್ಲಿ ನೆರವೇರಿಸುವ ಸಂಕಲ್ಪವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಡಿದ್ದಾರೆ.
ಸೋದೆ ಕ್ಷೇತ್ರದಲ್ಲಿ ವಾದಿರಾಜರ ವೃಂದಾವನವನ್ನು ಶಿಲಾಮಯಗೊಳಿಸುವು ದರೊಂದಿಗೆ ಸುಮಾರು 40ಕೋಟಿ ರೂ.ಗಳಿಗೂ ಅಧಿಕ ವಿವಿಧ ಕಾಮಗಾರಿ ಗಳನ್ನು ನೆರವೇರಿಸಿದ ಸೋದೆ ಶ್ರೀಗಳು, ಇದೀಗ ವಾದಿರಾಜರು ರಚಿಸಿ ಆಸ್ತಿಕ ಬಂಧುಗಳ ಇಷ್ಟಾರ್ಥ ನೆರವೇರಿಸುವ ಉದ್ದೇಶ ದಿಂದ ಸಮಾಜಕ್ಕೆ ನೀಡಿದ ‘ಲಕ್ಷ್ಮೀಶೋಭಾನೆ’ ಮಂಗಳಪ್ರದ ಹಾಡನ್ನು ಮನೆ ಮನೆಯಲ್ಲಿ ಹಾಡಿಸಿ ಭಕ್ತರಿಂದ ನೀಡಲ್ಪಟ್ಟ ಕಾಣಿಕೆಯನ್ನು ಸೋದೆ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಳಸುವ ಯೋಜನೆಯನ್ನು ಹೊಂದಿದ್ದಾರೆ.
ಇದೇ ಸಂದರ್ಭದಲ್ಲಿ ‘ಮನೆ-ಮನೆಯಲ್ಲಿ ಲಕ್ಷ್ಮೀಶೋಭಾನೆ’ ಯೋಜನೆಗೂ ಶ್ರೀಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಸೋದೆ ಶ್ರೀಗಳು, ಸುಬ್ರಹ್ಮಣ್ಯ ದೇವಳವನ್ನು ವಿಶೇಷ ರೀತಿಯಲ್ಲಿ ಅಭಿವೃದ್ಧಿ ಗೊಳಿಸಿದ ಗೋಪಾಲಕೃಷ್ಣ ಉಪಾಧ್ಯರ ಸೇವೆ ಅಪೂರ್ವವಾದುದು ಎಂದರು.
ದೇವಳದ ಅರ್ಚಕ ಬಿ.ಗೋಪಾಲಕೃಷ್ಣ ಉಪಾಧ್ಯ, ಪುತ್ತೂರು ಬ್ರಾಹ್ಮಣ ಸಭಾದ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ, ಹಯವದನ ಭಟ್, ಮುರಲಿ ಕಡೆಕಾರ್, ಪಿ.ದಿನೇಶ್ ಪೂಜಾರಿ, ಶ್ರೀಕಾಂತ ಉಪಾಧ್ಯ, ಶ್ರೀರಾಮ ಉಪಾಧ್ಯ ಹಾಗೂ ಅರಿತೋಡು ಜನಾರ್ದನ ಸುಬ್ರಹ್ಮಣ್ಯ ಭಜನಾ ಮಂಳಿಯ ಸದಸ್ಯರು ಉಪಸ್ಥಿತರಿದ್ದರು.