×
Ad

ಅ. 5ರಿಂದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕ ಸಂಪರ್ಕ ಕಾರ್ಯಕ್ರಮ, ಸ್ಥಳದಲ್ಲೇ ಸಾಲ

Update: 2019-10-02 19:44 IST

ಉಡುಪಿ, ಅ.2: ತನ್ನ ಸೇವೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡುತ್ತಾ ಬಂದಿರುವ ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕ್ ಅ.5ರಿಂದ ಎರಡು ದಿನಗಳ ಕಾಲ ಉಡುಪಿ, ಕಾರ್ಕಳ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಅರ್ಹರಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನೂ ಒದಗಿಸಲಾಗುತ್ತದೆ.

 ಕೇಂದ್ರ ಸರಕಾರದ ಹಣಕಾಸು ಇಲಾಖೆಯ ನಿರ್ದೇಶನದಂತೆ ಸಿಂಡಿಕೇಟ್ ಬ್ಯಾಂಕ್ ಮೊದಲ ಹಂತದಲ್ಲಿ 15 ನಗರಗಳಲ್ಲಿ ಅ.3ರಿಂದ 5ರವರೆಗೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಕರ್ನಾಟಕದ 6 ಕಡೆಗಳಲ್ಲಿ ಅ.5ರಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಮಂಗಳೂರು, ಪುತ್ತೂರು, ಬೆಳಗಾವಿ ಮತ್ತು ಚಿಕ್ಕೋಡಿ ಗ್ರಾಹಕ ಸಂಪರ್ಕ ಕಾರ್ಯಕ್ರಮ ನಡೆಯುವ ಇತರ ಸ್ಥಳಗಳಾಗಿವೆ.

ಈ ಕಾರ್ಯಕ್ರಮದಡಿ ಗ್ರಾಹಕರಿಗೆ ಬ್ಯಾಂಕ್‌ನಲ್ಲಿ ಲಭ್ಯವಿರುವ ವಿವಿಧ ಸಾಲಗಳು (ವಾಹನ, ಗೃಹ, ಶಿಕ್ಷಣ ಮತ್ತು ವೈಯಕ್ತಿಕ), ಕೃಷಿ ಸಾಲ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮ ಸಾಲವನ್ನು ಒಂದೇ ಸೂರಿನಡಿ ಅರ್ಹರಿಗೆ ಒದಗಿಸಲಾಗುತ್ತದೆ. ವಿವಿಧ ಸರಕಾರಿ ಬ್ಯಾಂಕುಗಳು, ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು, ನಬಾರ್ಡ್, ಎಸ್‌ಐಡಿಬಿಐ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಅಲ್ಲದೇ ಜನರು ಸ್ಥಳದಲ್ಲೇ ಉಳಿತಾಯ ಖಾತೆ ತೆರೆಯಬಹುದು, ಅವರಿಗೆ ಆಧಾರ್ ಮತ್ತು ಮೊಬೈಲ್ ಫೋನ್ ಲಿಂಕಿಂಗ್ ಸೇವೆಯನ್ನೂ ಒದಗಿಸಲಾಗುತ್ತದೆ.

ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಿಂಡಿಕೇಟ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ, ಆರ್ಥಿಕ ಅಬಿವೃದ್ಧಿಗಾಗಿ ನಮ್ಮ ಗ್ರಾಹಕರು ಬ್ಯಾಂಕ್ ಒದಗಿಸುವ ಸೇವಾಸೌಲಭ್ಯಗಳ ಕುರಿತು ಮಾಹಿತಿ ಹೊಂದಿರಬೇಕಾದದ್ದು ಅಗತ್ಯ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಮಟ್ಟಕ್ಕೂ ತಲುಪಬೇಕು ಎಂಬುದು ನಮ್ಮಉದ್ದೇವಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News