ಪಾಪ್ಯುಲರ್ ಫ್ರಂಟ್ ನಿಂದ ‘ಜನಾರೋಗ್ಯವೇ ರಾಷ್ಟ್ರ ಶಕ್ತಿ’ ರಾಷ್ಠ್ರೀಯ ಅಭಿಯಾನದ ಉದ್ಘಾಟನೆ
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ‘ಜನಾರೋಗ್ಯವೇ ರಾಷ್ಠ್ರ ಶಕ್ತಿ' ಎಂಬ ರಾಷ್ಠ್ರೀಯ ಅಭಿಯಾನದ ಅಂಗವಾಗಿ ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ‘ರಾಷ್ಢ್ರೀಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಢ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದಲಿ ಜಿನ್ನಾ ಮ್ಯಾರಥಾನ್‍ಗೆ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ “ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟಿದ ದಿನ. ಮಹಾತ್ಮ ಗಾಂಧೀಜಿಯಂತವರ ಒಗ್ಗಟ್ಟಿನ ಹೋರಾಟದಿಂದ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಆದರೆ ಗಾಂಧೀಜಿಯು ಕಂಡ ಸರ್ವರಿಗೂ ಸಮಪಾಳು ಸರ್ವರಿಗೂ ಸಮ ಬಾಳನ್ನು ಹೊಂದಿರುವ ಸ್ವತಂತ್ರ್ಯ ಇಂಡಿಯಾ ಕಲ್ಪನೆಯು ಇಂದು ಮರೆಯಾಗಿದೆ. ಗಾಂಧೀಜಿಯು ಇಂದು ಕೇವಲ ನೋಟಿನಲ್ಲಿ ಮಾತ್ರ ಉಳಿದಿದ್ದಾರೆಯೇ ಹೊರತು ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ಇಲ್ಲದಂತೆ ಮಾಡಲಾಗಿದೆ. ಗಾಂಧೀಜಿಯ ತತ್ವ, ಆದರ್ಶ ಮತ್ತು ಹೋರಾಟವನ್ನು ಜೀವಂತ ವಾಗಿಡುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಪ್ರತಿಯೊಬ್ಬರು ದೈಹಿಕವಾಗಿ ಬಲಿಷ್ಠರಾಗುವಂತೆ ಕರೆ ನೀಡಿದರು.
ಅಮೇರಿಕದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಮೋದಿ ಭಾರತದ ಎರಡನೇ ಪಿತಾಮಹ” ಎಂಬುವುದನ್ನು ಉಲ್ಲೇಖಿಸಿದ್ದು, ಭಾರತೀಯರಾದ ನಾವು ಮೋದಿಯನ್ನು ಈ ದೇಶದ ಪ್ರಧಾನ ಮಂತ್ರಿ ಎಂಬ ಕಾರಣಕ್ಕೆ ಮಾತ್ರ ಗೌರವಿಸುತ್ತೇವೆಯೇ ಹೊರತು ಈ ದೇಶದ ಪಿತಾಮಹ ಎಂದಾಗಲೀ, ಅವರು ಪ್ರತಿಪಾದಿಸುವ ವಿಚಾರ ಮತ್ತು ಸಿದ್ಧಾಂತವನ್ನಗಲೀ ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರಕ್ಕೆ ಒಂದೇ ಪಿತ, ಅದು ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಗಾಂಧೀಜಿ ಮಾತ್ರ, ಅವರನ್ನು ಬಿಟ್ಟು ಇನ್ನೊಬ್ಬ ಪಿತನಿಲ್ಲ ಎಂದು ಇದೇ ಸಂಧರ್ಭದಲ್ಲಿ ಒತ್ತಿ ಹೇಳಿದರು.
ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ವಾಹಿದ್ ಸೇಠ್ ಮಾತನಾಡಿ ಈ ಅಭಿಯಾನವನ್ನು ದೇಶದ ಪ್ರತಿಯೊಂದು ಹಲ್ಲಿಗಳಿಗೂ ತಲುಪಿಸಿ ಜನತೆಯನ್ನು ಆರೋಗ್ಯ ಮತ್ತು ಶಕ್ತಿಯುತರನ್ನಾಗಿಸುವ ಜಾಗೃತಿಯನ್ನು ಪಾಪ್ಯುಲರ್ ಫ್ರಂಟ್ ವರ್ಷಂಪ್ರತಿ ನಡೆಸುತ್ತಿದೆ. ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ಪ್ರತಿಯೊಬ್ಬರು ದೈಹಿಕವಾಗಿ ಶಕ್ತಿಯುತರನ್ನಾಗಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ ವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಅನಿವಾರ್ಯ ಸನ್ನಿವೇಶದಲ್ಲಿ ಉಪಯುಕ್ತವಾಗುವ ರಕ್ತವನ್ನು ದಾನಿಗಳಿಂದ ಸಂಗ್ರಹಿಸುವ ಸಲುವಾಗಿ ಬ್ಲಡ್ ಡೋನರ್ಸ್ ಫಾರಂ’ನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ, ಮಸ್ಜಿದ್ ಈ-ಅತೀಕ್ ಇಮಾಮ್ ಮುಫ್ತಿ ಇರ್ಷಾದ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ, ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕಬ್ಬಡ್ಡಿ ತರಬೇತುದಾರ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಪುರಭವನದ ಮುಂಭಾಗದಲ್ಲಿ ಯೋಗ ಪ್ರಾತ್ಯಕ್ಷಿಕೆ, ಆತ್ಮ ರಕ್ಷಣೆಯ ಕಲೆಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿ ಸಲಾಯಿತು. ಬೆಂಗಳೂರು ಜಿಲ್ಲಾಧ್ಯಕ್ಷ ವಾಜಿದ್ ಸ್ವಾಗತಿಸಿ, ಕಾರ್ಯದರ್ಶಿ ನಸೀರುದ್ದೀನ್ ವಂದಿಸಿದರು.