×
Ad

ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ ಅಭಿಯಾನ

Update: 2019-10-02 21:51 IST

ಉಡುಪಿ, ಅ.2: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಮತ್ತು ಲಿಯೋ ಜಿಲ್ಲಾ 317ಸಿ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಪರಿಸರದ ಜಾಗೃತಿ ಅಭಿಯಾನವನ್ನು ಬುಧವಾರ ಉಡುಪಿಯಲ್ಲಿ ಆಯೋಜಿಸ ಲಾಗಿತ್ತು.

ಈ ಕುರಿತು ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಗಾಂಧಿ ಪ್ರತಿಮೆಯವರೆಗೆ ಹಮ್ಮಿಕೊಳ್ಳಲಾದ ಜಾಥಕ್ಕೆ ಲಯನ್ಸ್ ಜಿಲ್ಲಾ ಗರ್ವನರ್ ವಿ. ಜಿ.ಶೆಟ್ಟಿ ಚಾಲನೆ ನೀಡಿದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸ್ಕೌಟ್ಸ್ ವಿದ್ಯಾರ್ಥಿಗಳು, ಲಯನ್ಸ್ ಸದಸ್ಯರು, ಬಡಗಬೆಟ್ಟು ಸೊಸೈಟಿ ಸಿಬ್ಬಂದಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಉಡುಪಿ ಕ್ಲೀನ್ ಸಿಟಿ ಬಗ್ಗೆ ಗಣೇಶ್ ಪ್ರಸಾದ್ ಪ್ಲಾಸಿಕ್ಟ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಪ್ಲಾಸ್ಟಿಕ್ ಬಳಕೆಯ ಕೆಡುಕಿನ ಬಗ್ಗೆ ತಿಳಿಸಿದರು. ಅಧ್ಯಕ್ಷತೆಯನ್ನು ಲಯನ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ವಹಿಸಿದ್ದರು.

ಇದಕ್ಕೂ ಮೊದಲು ವಿಶ್ವ ಶಾಂತಿಗಾಗಿ ಜಿಲ್ಲಾ ಸ್ಕೌಟ್ ಮತ್ತು ಗೈಡ್ ವತಿ ಯಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಪ್ರಥಮ ಉಪ ಜಿಲ್ಲಾ ಗರ್ವನರ್ ಎನ್.ಎಂ.ಹೆಗ್ಡೆ, ದ್ವಿತೀಯ ಉಪ ಜಿಲ್ಲಾ ಗರ್ವನರ್ ವಿಶ್ವನಾಥ್ ಶೆಟ್ಟಿ, ಮಾಜಿ ಜಿಲ್ಲಾ ಗರ್ವನರ್ ಡಾ.ಎ.ರವೀಂದ್ರನಾಥ್ ಶೆಟ್ಟಿ, ಜಿಲ್ಲಾ ಮೆಂಟರ್ ಡಾ.ಕೆ. ಮಧುಸೂಧನ್ ಹೆಗ್ಡೆ, ಲಿಯೋ ಫೌಜನ್ ಅಕ್ರಮ್, ಚಂದ್ರಹಾಸ್ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News