ಮಾದಕ ದ್ರವ್ಯ ವಿರುದ್ಧ ಜನಜಾಗೃತಿಗಾಗಿ ಕಾಲ್ನಾಡಿಗೆ ಜಾಥ
ಕಾಪು, ಅ.2: ಎಸ್ಸೆಸ್ಸೆಫ್ ಕಾಪು ಡಿವಿಷನ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಮಾದಕದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಪೊಲಿಪು ಮಸೀದಿಯಿಂದ ಹೊರಟ ಕಾಲ್ನಾಡಿಗೆ ಜಾಥವು ಕಾಪು ಪೇಟೆ ಯಲ್ಲಿ ಸಮಾಪ್ತಿಗೊಂಡಿತು. ಬಳಿಕ ಗಾಂಧೀಜಿಯ ಕನಸು ನನಸಾಗಲಿ ಎಂಬ ಘೋಷವಾಕ್ಯದಡಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಸೆಸ್ಸೆಫ್ ಜಿಲ್ಲಾ ನಾಯಕ ಮುಹಮ್ಮದ್ ರಕೀಬ್ ಕನ್ನಂಗಾರ್, ಈ ದೇಶದ ಸಂವಿಧಾನ ಹೇಳಿ ರುವಂತೆ ಪ್ರತಿಯೊಂದು ರಾಜ್ಯಗಳು ಕೂಡ ಮದ್ಯಪಾನವನ್ನು ನಿಷೇಧಿಸಬೇಕು. ಗಾಂಧಿ ಈ ಜಗತ್ತಿಗೆ ಸಾರಿದ ಅಹಿಂಸೆ, ಸೌಹಾರ್ದತೆ, ಶಾಂತಿಯ ಸಿದ್ಧಾಂತ ಗಳನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರು ಅಳವಡಿಸಿಕೊಂಡರೇ ಉತ್ಕೃಷ್ಟ ಭಾತ ನಿರ್ಮಾಣ ಆಗಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಕಾಪು ಡಿವಿಷನ್ ಅಧ್ಯಕ್ಷ ಶಾಹುಲ್ ಹಮೀದ್ ನಈಮಿ ಕನ್ನಂಗಾರ್ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಪಣಿಯೂರು, ಜಿಲ್ಲಾ ಈವೆಂಟ್ ಕಾರ್ಯದರ್ಶಿ ಮಜೀದ್ ಹನೀಫಿ, ಜಿಲ್ಲಾ ಸದಸ್ಯ ಸಲೀಂ ಪಕೀರ್ಣಕಟ್ಟೆ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಂ ಮಜೂರು ಉಪಸ್ಥಿತರಿದ್ದರು. ಕಾಪು ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ ಸ್ವಾಗತಿಸಿ ವಂದಿಸಿದರು.