ಕೊಂಕಣ ರೈಲ್ವೆ: 2020ರ ಡಿಸೆಂಬರ್‌ಗೆ ವಿದ್ಯುದ್ದೀಕರಣ ಪೂರ್ಣ
ಉಡುಪಿ, ಅ.2: ಕೊಂಕಣ ರೈಲ್ವೆ ಮಾರ್ಗದಲ್ಲಿ ರೋಹಾದಿಂದ ತೋಕೂರು ವರೆಗಿನ 741 ಕಿ.ಮೀ. ಉದ್ದದ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಒಟ್ಟು 1,100 ಕೋಟಿ ರೂ.ವೆಚ್ಚದಲ್ಲಿ 2020ರ ಡಿ.31ರೊಳಗೆ ಪೂರ್ಣಗೊಳ್ಳಲಿದೆ ಎಂದು ಕೊಂಕಣ ರೈಲ್ವೆಯ ಕಾರವಾರದ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಬಿ.ಬಿ.ನಿಕಂ ತಿಳಿಸಿದ್ದಾರೆ.
ಉಡುಪಿಯಲ್ಲಿಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 741ಕಿ.ಮೀ. ಮಾರ್ಗದ 970 ಕಿ.ಮೀ. ಉದ್ದದ ಹಳಿಗಳ ವಿದ್ಯುದ್ದೀಕರಣ ಕಾಮಗಾರಿ ಎರಡು ಭಾಗಗಳಾಗಿ 2017ರ ಮೇ ಮತ್ತು ಆಗಸ್ಟ್‌ನಲ್ಲಿ ಪ್ರಾರಂಭಗೊಂಡಿದ್ದು, ಮುಂದಿನ ವರ್ಷದ ಡಿಸೆಂಬರ್ ಕೊನೆಯೊಳಗೆ ಸಂಪೂರ್ಣಗೊಳ್ಳಲಿದೆ ಎಂದರು.
ರೋಹಾದಿಂದ ವೇರ್ನಾವರೆಗಿನ 428ಕಿ.ಮೀ. ಮಾರ್ಗದ ಕಾಮಗಾರಿ ಯನ್ನು 456 ಕೋಟಿ ರೂ.ವೆಚ್ಚದಲ್ಲಿ ಲಾರ್ಸನ್ ಎಂಡ್ ಟೊಬ್ರೊ ಕಂಪೆನಿ ನಿರ್ವಹಿಸುತ್ತಿದೆ. ಅದೇ ರೀತಿ ವೇರ್ನಾದಿಂದ ತೋಕೂರುವರೆಗೆ 312 ಕಿ.ಮೀ. ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನು ಕಲ್ಪತರು ಪವನ್ ಟ್ರಾನ್ಸ್‌ಮಿಷನ್ ಲಿ. 317 ಕೋಟಿ ರೂ.ವೆಚ್ಚದಲ್ಲಿ ನಿರ್ವಹಿಸುತ್ತಿದೆ.
ಎರಡೂ ಕಡೆಯಿಂದ ಒಟ್ಟಿಗೆ ಕಾಮಗಾರಿ ನಡೆಯುತಿದ್ದು, ಇದುವರೆಗೆ 423 ಕೋಟಿ ರೂ. ವೆಚ್ಚದಲ್ಲಿ ಶೇ.40.7ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ದಕ್ಷಿಣ ಭಾಗದ 108 ಕಿ.ಮೀ. ಉದ್ದದ ವಯರಿಂಗ್ ಕೆಲಸಗಳನ್ನು ಪೂರ್ಣಗೊಂಡಿವೆ ಎಂದು ನಿಕಂ ವಿವರಿಸಿದರು.
ಅದೇ ರೀತಿ ಕೊಂಕಣ ರೈಲ್ವೆಯ ಹಳಿಗಳನ್ನು ದ್ವಿಪಥಗೊಳಿಸುವ ಡಬ್ಲಿಂಗ್ ಕಾಮಗಾರಿಯೂ ನಡೆಯುತಿದ್ದು, ರೋಹಾದಿಂದ ವೀರ್‌ವರೆಗಿನ 46.87 ಕಿ.ಮೀ. ಉದ್ದದ ಹಳಿಗಳ ಡಬ್ಲಿಂಗ್ 410 ಕೋಟಿ ರೂ.ವೆಚ್ಚದಲ್ಲಿ ಈ ವರ್ಷ ಡಿಸೆಂಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈವರೆಗೆ ಶೇ.87ರಷ್ಟು ಕಾರ್ಯ ಪೂರ್ಣಗೊಂಡಿದ್ದು 273 ಕೋಟಿ ರೂ.ವೆಚ್ಚವಾಗಿದೆ ಎಂದರು.
ಅದೇ ರೀತಿ ಕೊಂಕಣ ರೈಲ್ವೆಯ ಹಳಿಗಳನ್ನು ದ್ವಿಪಥಗೊಳಿಸುವ ಡಬ್ಲಿಂಗ್ ಕಾಮಗಾರಿಯೂ ನಡೆಯುತಿದ್ದು, ರೋಹಾದಿಂದ ವೀರ್‌ವರೆಗಿನ 46.87 ಕಿ.ಮೀ. ಉದ್ದದ ಹಳಿಗಳ ಡಬ್ಲಿಂಗ್ 410 ಕೋಟಿ ರೂ.ವೆಚ್ಚದಲ್ಲಿ ಈ ವರ್ಷ ಡಿಸೆಂಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈವರೆಗೆ ಶೇ.87ರಷ್ಟು ಕಾರ್ಯ ಪೂರ್ಣಗೊಂಡಿದ್ದು 273 ಕೋಟಿ ರೂ.ವೆಚ್ಚವಾಗಿದೆ ಎಂದರು. ಕೊಂಕಣ ರೈಲು ಮಾರ್ಗದಲ್ಲಿ ಒಟ್ಟು 141 ಕಿ.ಮೀ. ಮಾರ್ಗವನ್ನು ದ್ವಿಪಥ ಗೊಳಿಸುವ ಹಾಗೂ 18 ಹೊಸ ರೈಲು ನಿಲ್ದಾಣಗಳನ್ನು ನಿರ್ಮಿಸುವ 4980 ಕೋಟಿ ರೂ.ಗಳ ಯೋಜನೆಗೆ ರೈಲ್ವೆ ಸಚಿವಾಲಯ 2016ರಲ್ಲಿ ಅನುಮೋದನೆ ನೀಡಿದ್ದು, 2017ರಲ್ಲಿ ನೀತಿ ಆಯೋಗ ಹಾಗೂ 2018ರಲ್ಲಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದರು.
ಕೊಂಕಣ ರೈಲ್ವೆ ಮಾರ್ಗದ ದ್ವಿಪಥ ಪೂರ್ಣಗೊಂಡ ಬಳಿಕ ಈಗ ಪ್ರತಿದಿನ34 ರೈಲುಗಳು ಓಡುವ ಸಾಮರ್ಥ್ಯ ಪ್ರತಿದಿನ 54 ರೈಲು ಓಡಾಡುವ ಸಾಮರ್ಥ್ಯವನ್ನು ಪಡೆಯಲಿದೆ ಎಂದೂ ಅವರು ಹೇಳಿದರು.
ಕೊಂಕಣ ರೈಲ್ವೆ ಮಾರ್ಗದ ದ್ವಿಪಥ ಪೂರ್ಣಗೊಂಡ ಬಳಿಕ ಈಗ ಪ್ರತಿದಿನ34 ರೈಲುಗಳು ಓಡುವ ಸಾಮರ್ಥ್ಯ ಪ್ರತಿದಿನ 54 ರೈಲು ಓಡಾಡುವ ಸಾಮರ್ಥ್ಯವನ್ನು ಪಡೆಯಲಿದೆ ಎಂದೂ ಅವರು ಹೇಳಿದರು. ಇದರೊಂದಿಗೆ 10 ಹೊಸ ಕ್ರಾಸಿಂಗ್ ಸ್ಟೇಶನ್ ಹಾಗೂ 8 ಹೆಚ್ಚುವರಿ ಲೂಪ್ ಲೈನ್ಸ್‌ಗಳ ಅಳವಡಿಕೆ ಕಾರ್ಯವೂ 202 ಕೋಟಿ ರೂ.ವೆಚ್ಚದಲ್ಲಿ ನಡೆದಿದ್ದು, ಇದರ ಕಾಮಗಾರಿ ಸಹ 2019ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದರು.
ಸ್ವಚ್ಛ ಭಾರತ ಅಭಿಯಾನ: ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಕೊಂಕಣ ರೈಲ್ವೆ ಮಾರ್ಗಗಳಲ್ಲಿ ‘ಸ್ವಚ್ಛ ಪಕ್ವಾರ’ ಸೆ.16ರಿಂದ ಅ.2ರವರೆಗೆ ನಡೆಯಿತು. ಈ ಅವಧಿಯಲ್ಲಿ ಸ್ವಚ್ಚ ರೈಲು, ಸ್ವಚ್ಛ ಬೋಗಿ, ಸ್ವಚ್ಛ ನೀರು, ಸ್ವಚ್ಛ ಆಹಾರ, ಸ್ವಚ್ಛ ಪರಿಸರವನ್ನು ಗ್ರಾಹಕರಿಗೆ ಒದಗಿಸಲು ಆದ್ಯತೆ ನೀಡಲಾಗಿದೆ ಎಂದರು.
ಸ್ವಚ್ಛತಾ ಆಂದೋಲನದ ಸಂದರ್ಭದಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲು ಹಾಗೂ ರೈಲು ನಿಲ್ದಾಣಗಳ ಪರಿಸರ ಸ್ವಚ್ಚತೆಯನ್ನು ವಿವಿಧ ಸಂಘಟನೆಗಳು ಹಾಗೂ ಎನ್ನೆಸ್ಸೆಸ್ ವಿದ್ಯಾರ್ಥಿಗಳ ನೆರವಿನಿಂದ ಕೈಗೊಳ್ಳಲಾಗಿದೆ. ವಿವಿಧ ವಿದ್ಯಾರ್ಥಿ ಸಂಘಟನೆ ಹಾಗೂ ಎನ್‌ಜಿಓಗಳ ಸಹಕಾರದೊಂದಿಗೆ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲಾಗಿದೆ ಎಂದರು.
15 ದಿನಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಒಟ್ಟು 11,140 ಕೆ.ಜಿ. ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ. ಇದರಲ್ಲಿ 2700ಕ್ಕೂ ಅಧಿಕ ಸಿಬ್ಬಂದಿಗಳು, 500ರಷ್ಟು ಸಾರ್ವಜನಿಕರು, 400 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದವರು ವಿವರಿಸಿದರು.
ಕೊಂಕಣ ರೈಲ್ವೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.