ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್: ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಅಭಿಯಾನ

Update: 2019-10-02 17:00 GMT

ಬಂಟ್ವಾಳ, ಅ.2: ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜಾಗೃತಿ ಅಭಿಯಾನವು ಮೆಲ್ಕಾರ್ ಜಂಕ್ಷನ್ ನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಅಧ್ಯಕ್ಷ ಉಸ್ಮಾನ್ ಸಖಾಫಿ ಸಜಿಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಉಪಾಧ್ಯಕ್ಷ ಸದ್ದಾಂ ಹುಸೈನ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ನಂದಾವರ ಶಾಖೆ ಅಧ್ಯಕ್ಷ ಎ.ಕೆ ನಂದಾವರ 'ಗಾಂಧೀಜಿಯ ಕನಸಿನ ಭಾರತ' ಎಂಬ ವಿಷಯದ ಬಗ್ಗೆ ಮಾತನಾಡಿ, ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು. ಮಾದಕ ದ್ರವ್ಯ ವಿರುದ್ಧ ಎಸ್ಸೆಸ್ಸೆಫ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈ ಹೋರಾಟ ಮುಂದುವರಿಯಲಿದ್ದು, ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಯೂ ಟೀಮ್ ಸೆಕ್ಟರ್ ಮೆಂಟರ್ ಇಬ್ರಾಹಿಂ ಆಲಡ್ಕ, ಸಿದ್ದೀಕ್ ಸಖಾಫಿ ಸಜೀಪ ಹಾಗೂ ಸೆಕ್ಟರ್ ವ್ಯಾಪ್ತಿಯ ವಿವಿಧ ಶಾಖೆಗಳ ಕ್ಯೂ ಟೀಮ್ ಕಾರ್ಯಕರ್ತರು, ಸಂಘಟನಾ ನಾಯಕರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಮಹ್ಸೂಫ್ ಅಬ್ದುಲ್ಲಾ ಸ್ವಾಗತಿಸಿ, ಉಸ್ಮಾನ್ ಸಖಾಫಿ ಸಜಿಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News