×
Ad

ಕಾಶ್ಮೀರಿಗಳ ಮೇಲೆ ಹೇರಲಾದ ನಿರ್ಬಂಧಗಳನ್ನು ಕೂಡಲೇ ತೆರವುಗೊಳಿಸಿ: ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹ

Update: 2019-10-02 23:11 IST

ಹೊಸದಿಲ್ಲಿ :  ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್  ತೀವ್ರ ಕಳವಳ ವ್ಯಕ್ತಪಡಿಸಿದ್ದು, ನವದೆಹಲಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಅದತುಲ್ಲಾ ಹುಸೇನಿ, “ಕಾಶ್ಮೀರದ ಜನರ ಮೇಲಿನ ತೀವ್ರ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಕಾಶ್ಮೀರಿಗಳಿಂದ ಕಿತ್ತುಕೊಳ್ಳಲಾಗಿದೆ. ಇಡೀ ರಾಜ್ಯದ ರಾಜಕೀಯ ನಾಯಕರನ್ನು ಬಂಧಿಸಲಾಗಿದ್ದು, ಇದು ಪ್ರಜಾಪ್ರಭುತ್ವದ ನೀತಿಗೆ ವಿರುದ್ಧವಾಗಿದೆ. ಮಾನವ ಹಕ್ಕು ಸಂಘಟನೆಗಳು ಮತ್ತು ನಾಗರಿಕ ಸಮಾಜ ನೇತೃತ್ವದ ತಂಡಗಳು ಕಾಶ್ಮೀರಕ್ಕೆ ಸಂಬಂಧಿಸಿ ಬಿಡುಗಡೆಗೊಳಿಸಿರುವ ಸತ್ಯ-ಶೋಧನಾ ವರದಿಗಳು ಕಳವಳಕಾರಿಯಾಗಿದೆ. ಅನ್ಯಾಯವಾಗಿ ಕಾಶ್ಮೀರಿ ಯುವಕರನ್ನು ಬಂಧಿಸಿರುವುದು, ಪ್ರತಿಭಟನೆಗಳನ್ನು ಬಲವಂತದಿಂದ ಹತ್ತಿಕ್ಕುತ್ತಿರುವುದು, ಔಷಧಿಗಳ ಕೊರತೆ ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಈ ವರದಿಗಳು ಬೊಟ್ಟು ಮಾಡಿವೆ ಎಂದು ಸಅದತುಲ್ಲಾ ಹುಸೇನಿ ಕಳವಳ ವ್ಯಕ್ತಪಡಿಸಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಮಾತಾಡುತ್ತಾ, “ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಮಾತುಕತೆ, ಸಮಾಲೋಚನೆ ಮತ್ತು ಸಂವಾದದ ಮೂಲಕ ಪರಿಹರಿಸಬೇಕು ಎಂಬ ತನ್ನ ದೀರ್ಘಕಾಲದ ನಿಲುವಿಗೆ ಜಮಾಅತ್ ಈಗಲೂ ಬದ್ಧವಾಗಿದೆ ಎಂದರು.

ಭಾರತದ ಆರ್ಥಿಕತೆಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ಹೂಡಿಕೆಯನ್ನು ಹೆಚ್ಚುಗೊಳಿಸಲು ಬಡ್ಡಿ ಆಧಾರಿತ ಹಣಕಾಸು ನೀತಿಗಿಂತ ಈಕ್ವಿಟಿ ಆಧಾರಿತ ಹಣಕಾಸು ಕಡೆಗೆ ಸಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News