ಕಾರ್ಕಳ: ವನ್ಯಜೀವಿ ಸಪ್ತಾಹದ ಅಂಗವಾಗಿ ಜಾಥಾ
ಕಾರ್ಕಳ: ವನ್ಯಜೀವಿ ಸಪ್ತಾಹದ ಅಂಗವಾಗಿ ಜಾಥಾ ಉಡುಪಿ, ಅ.3: 65ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಬುಧವಾರ ಕಾರ್ಕಳದ ಕುದುರೆಮುಖ ವನ್ಯಜೀವಿ ವಿಬಾಗದ ವತಿಯಿಂದ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಜನಾಂದೋಲನ ಕುರಿತು ಜಾಥ ಕಾರ್ಯಕ್ರಮ ನಡೆಯಿತು.
ಜಾಥಾವನ್ನು ಕಾರ್ಕಳ ಶಾಸಕ ಸುನೀಲ್‌ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು. ಕಾರ್ಕಳ ತಾಲೂಕು ಕಚೇರಿ, ಬಂಡೀಮಠ ಬಸ್ಸು ನಿಲ್ದಾಣ, ವೆಂಕಟರಮಣ ದೇವಸ್ಥಾನ, ಮುಖ್ಯ ಬಸ್‌ನಿಲ್ದಾಣದಿಂದ ಅನಂತ ಶಯನ ವೃತ್ತದವರೆಗೆ ಜಾಥ ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭ ಕಸ್ತೂರಿ ರಂಗವೇದಿಕೆಯಲ್ಲಿ ನಡೆಯಿತು. ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಪಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ವನ್ಯಜೀವಿ ವಲಯ ಮಟ್ಟದಲ್ಲಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾ ವಿತರಿಸಲಾಯಿತು.
ಕುದುರೆಮುಖ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್., ಸಿದ್ದಾಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಾನ್‌ದಾಸ್ ಕುಡ್ತಲ್ಕರ್, ಉಪನ್ಯಾಸಕಿ ಜ್ಯೋತಿ ಶೆಟ್ಟಿ, ಕಾರ್ಕಳ ಮಂಜುನಾಥ ಪೈ ಪದವಿ ಕಾಲೇಜು ಉಪನ್ಯಾಸಕ ಸುಮಂತ್ ಕುಮಾರ್ ಜೈನ್, ಸರ್ಕಾರಿ ಪ್ರೌಢಶಾಲೆ ಪೆರ್ವಾಜೆ, ಮಂಜುನಾಥ ಪೈ ಮೆಮೊರಿಯಲ್ ಕಾಲೇಜಿನ ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿಗು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಗಣಪತಿ ನಾಯ್ಕ ಸ್ವಾಗತಿಸಿದರು. ನಾಗರಾಜ್ ಎಂ ಪಟ್ವಾಲ್ ಕಾರ್ಯಕ್ರಮ ನಿರೂಪಿಸಿದರು.