×
Ad

ಅ.5ರಂದು ಅದಮಾರು ಪರ್ಯಾಯ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ

Update: 2019-10-03 21:30 IST

ಉಡುಪಿ, ಅ.3: ಮುಂದಿನ ವರ್ಷದ ಜನವರಿಯಲ್ಲಿ ನಡೆಯುವ ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ವೈಶಿಷ್ಟ ಪೂರ್ಣ ಹಾಗೂ ಪರಿಸರ ಪೂರಕವಾಗಿ ನಡೆಸುವ ಸಲುವಾಗಿ ಪೂರ್ವಭಾವಿ ಸಮಾಲೋಚನಾ ಸಭೆಯು ಅ.5ರ ಶನಿವಾರ ಸಂಜೆ 4:30ಕ್ಕೆ ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನ ಮಿನಿ ಹಾಲಿನಲ್ಲಿ ನಡೆಯಲಿದೆ.

ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಅದಮಾರು ಕಿರಿಯರಾದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅವರು ಸಭೆಯಲ್ಲಿ ಉಪಸ್ಥಿತರಿರುವರು. ಈ ಸಭೆಗೆ ಮಠದ ಶಿಷ್ಯರು, ಅಭಿಮಾನಿಗಳು,ಭಕ್ತಾಭಿಮಾನಿಗಳು ಆಗಮಿಸಿ ಸೂಕ್ತ ಸಲಹೆ ಸೂಚನೆಯನ್ನು ನೀಡಿ ಪರ್ಯಾಯೋತ್ಸವ ಯಶಸ್ವಿಗೊಳ್ಳುವಲ್ಲಿ ಸಹಕರಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News