ಕೆ.ಸಿ.ರೋಡ್: ಜನಜಾಗೃತಿ ಜಾಥಾ
ಕೆ.ಸಿ.ರೋಡ್, ಅ.3:ಎಸ್ಸೆಸ್ಸೆಫ್ ತಲಪಾಡಿ ಹಾಗೂ ಕೋಟೆಕಾರ್ ಸೆಕ್ಟರ್ ವತಿಯಿಂದ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಮಾದಕ ದ್ರವ್ಯ ವಿರುದ್ಧ ತಲಪಾಡಿಯಿಂದ ಕೆ.ಸಿ.ರೋಡ್‌ವರೆಗೆ ಬುಧವಾರ ಜನ ಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಜಾಬಿರ್ ಫಾಳಿಲಿ ದುಆ ಮಾಡಿದರು. ದಿಕ್ಸೂಚಿ ಭಾಷಣಗೈದ ಸೆಂಟರ್ ಅಧ್ಯಕ್ಷ ಹಾಜಿ ಎನ್.ಎಸ್. ಉಮರ್ ಮಾಸ್ಟರ್ ‘ಗಾಂಧೀಜಿಯ ಕನಸಿನ ಭಾರತ ಸಾಕ್ಷಾತ್ಕಾರಗೊಳ್ಳಬೇಕು. ಭವಿಷ್ಯಕ್ಕೆ ಮಾರಕವಾದ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು. ಮಾದಕ ದ್ರವ್ಯ ವಿರುದ್ಧ ಎಸ್ಸೆಸ್ಸೆಫ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈ ಹೋರಾಟ ಮುಂದುವರಿಯಲಿದೆ’ ಎಂದರು.
ಹಮೀದ್ ತಲಪಾಡಿ ಮಾತನಾಡಿದರು. ಮುಸ್ತಫಾ ಝುಹ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ದೀಕ್ ಕೊಮರಂಗಲ ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಸಅದಿ ಹೂಸ್ಮಾರ್ ಮುಖ್ಯ ಭಾಷಣ ಮಾಡಿದರು. ಸೆಕ್ಟರ್ ಕಾರ್ಯದರ್ಶಿ ಅನ್‌ವೀಝ್ ಸ್ವಾಗತಿಸಿದರು. ಉಸ್ಮಾನ್ ಪಲ್ಲ ಕೆ.ಸಿ.ರೋಡು, ಖಾದರ್ ಮಕ್ಯಾರ್, ಮುಹಮ್ಮದ್ ಉಚ್ಚಿಲ, ಅಬ್ಬಾಸ್ ಪೂಮಣ್ಣ್, ಅಬೂಬಕರ್ ಕೆ.ಸಿ.ನಗರ ಉಪಸ್ಥಿತರಿದ್ದರು.