ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ
Update: 2019-10-03 21:54 IST
ಮಂಗಳೂರು, ಅ.3: ನಗರದ ಕಾವೂರು ಪದವು ನಿವಾಸಿಯೊಬ್ಬರು ಮನೆಯ ರೂಮಿನಲ್ಲಿ ಗುರುವಾರ ಸಂಜೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾವೂರು ಪದವು ನಿವಾಸಿ ಆನಂದ್ (58) ಮೃತಪಟ್ಟ ವ್ಯಕ್ತಿ.
ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಮನೆಯಲ್ಲಿ ವಿನಾಕಾರಣ ಪದೇಪದೇ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಬುಧವಾರವೂ ಇದೇ ರೀತಿ ಗಲಾಟೆ ಮಾಡಿ ಮನೆಯ ದೈವಕ್ಕೆ ಸಂಬಂಧಪಟ್ಟ ಸೊತ್ತುಗಳನ್ನು ಬಿಸಾಡಿದ್ದರು. ಇದಾದ ಬಳಿಕ ತುಂಬ ನೊಂದುಕೊಂಡಿದ್ದರು. ಗುರುವಾರ ಸಂಜೆ 6ಗಂಟೆ ಹೊತ್ತಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 7:30ರ ವೇಳೆಗೆ ಮನೆಯವರು ಮರಳಿ ಬಂದಾಗ ಆನಂದ್ ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾವೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.