ಬಸ್ ಸಮಯದ ವಿಚಾರಕ್ಕೆ ಜಗಳ; ಹಲ್ಲೆ, ಜೀವಬೆದರಿಕೆ
Update: 2019-10-03 22:34 IST
ಉಡುಪಿ, ಅ.3: ಬಸ್ ಸಮಯದ ವಿಚಾರದಲ್ಲಿ ಎರಡು ಬಸ್ ಚಾಲಕರು ಹಾಗೂ ನಿರ್ವಾಹಕರ ನಡುವೆ ಜಗಳ ಆರಂಭವಾಗಿ ಜೀವ ಬೆದರಿಕೆ ಯೊಡ್ಡಿರುವ ಘಟನೆ ಬುಧವಾರ ನಡೆದಿದೆ.
ಅ.1ರಂದು ಬಸ್ ಟೈಮಿಂಗ್ಸ್ ವಿಚಾರಕ್ಕೆ ಸಂಬಂಧಿಸಿ ಎಕೆಎಂಎಸ್ ಹಾಗೂ ಕೊಹಿನೂರ್ ಹೆಸರಿನ ಖಾಸಗಿ ಬಸ್ ಚಾಲಕರು ಹಾಗೂ ನಿರ್ವಾಹಕರ ನಡುವೆ ಮುಲ್ಕಿಯಲ್ಲಿ ಜಗಳವಾಗಿತ್ತು ಎನ್ನಲಾಗಿದೆ.
ಈ ಘಟನೆಗೆ ಪ್ರತಿಕಾರವಾಗಿ ಅ.2ರಂದು ಸಂಜೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿ ಕೊಹಿನೂರ್ ಬಸ್‌ನ ಚಾಲಕ, ನಿರ್ವಾಹಕ ಹಾಗೂ ಇತರ ಸುಮಾರು 7-8 ಜನರು 2 ಕಾರಿನಲ್ಲಿ ಬಂದು ಎಕೆಎಂಎಸ್ ಬಸ್‌ನ ನಿರ್ವಾಹಕ ಅಬ್ದುಲ್ ಮುನ್ಾ ಮತ್ತು ಚಾಲಕ ಪವಿತ್ರ ಕುಮಾರ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ತಲವಾರು ಮತ್ತು ಚೂರಿ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.