ಚಿನ್ನಾಭರಣ ಸಹಿತ ಯುವತಿ ನಾಪತ್ತೆ
Update: 2019-10-03 22:50 IST
ವಿಟ್ಲ, ಅ. 3: ಯುವತಿಯೊಬ್ಬಳು ಮನೆಯಲ್ಲಿ ಯಾರಲ್ಲಿಯೂ ಹೇಳದೇ ಚಿನ್ನಾಭರಣಗಳ ಸಹಿತ ತೆರಳಿದವಳು ಹಿಂದಿರುಗಿ ಬಾರದೇ ನಾಪತ್ತೆಯಾದ ಘಟನೆ ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ನಡೆದಿದೆ.
ಕೇಪು ಗ್ರಾಮದ ಕಟ್ಟೆ ಹೊಸ ಮನೆ ನಿವಾಸಿ ದಿವ್ಯಾ (28) ನಾಪತ್ತೆಯಾದವಳು.
ಇವರು ಸೆ.30ರಂದು ಬೆಳಿಗ್ಗೆ ಮನೆಯಲ್ಲಿದ್ದ ಕೆಲವು ಚಿನ್ನಾಭರಣವನ್ನು ತೆಗೆದುಕೊಂಡು ಹೋದವಳು ಇದುವರೆಗೂ ಹಿಂದಿರುಗಿ ಬಂದಿಲ್ಲ. ಈ ಬಗ್ಗೆ ಆಕೆಯ ಸಹೋದರ ಜಯ ಪ್ರಕಾಶ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.