ದಾರುನ್ನೂರ್ 5ನೇ ವಾರ್ಷಿಕ, ಮೀಲಾದ್ ಸಮಾವೇಶ- ಸ್ವಾಗತ ಸಮಿತಿ ರಚನೆ

Update: 2019-10-03 17:48 GMT

ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ಕಲ್ಚರಲ್ ಸೆಂಟರ್ ತನ್ನ  5 ನೇ ವಾರ್ಷಿಕ ಸಮ್ಮೇಳನ ಮತ್ತು ಮೇಹಫಿಲ್ ಏ ಮೀಲಾದುನ್ನಬಿ – 2019  ಸಮಾವೇಶವನ್ನು ನ.22 ರಂದು ಆಚರಿಸುವುದಾಗಿ ಸಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಾಹುಲ್ ಬಿ.ಸಿ ರೋಡ್ ದುಆ ಬಳಿಕ  ಸಯ್ಯದ್ ಆಸ್ಕರ್ ಅಲಿ ತಂಞಳ್ ಉದ್ಘಾಟನೆಗೈದರು. ಬಳಿಕ 5 ನೇ ವಾರ್ಷಿಕ ಸಮ್ಮೇಳನ ಮತ್ತು ಮೆಹಫಿಲ್ ಏ  ಮೀಲಾದುನ್ನಬಿ – 2019 ಕಾರ್ಯಕ್ರಮದ ರೂಪು ರೇಷೆಯನ್ನು ಸಿದ್ಧಪಡಿಸಲಾಯಿತು.

ಬೆಳಿಗ್ಗೆ  10 ರಿಂದ ರಾತ್ರಿ 11 ಗಂಟೆಯವರೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಕ್ಕಳಿಗೆ , ವಯಸ್ಕರಿಗೆ ಮತ್ತು ಮಹಿಳೆಯರಿಗೆ ಧರ್ಮದ ಚೌಕಟ್ಟಿನೊಳಗೆ ಹಲವು  ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಬುರ್ಧಾ ಮಜ್ಲಿಸ್ ಮತ್ತು ದಫ್ ಕಾರ್ಯ ಕ್ರಮಗಳನ್ನು ನಡೆಸಲಾಗುವುದು. ಮುಖ್ಯ ಪ್ರಭಾಷಕರಾಗಿ ಕುಮ್ಮನಮ್ ನಿಝಾಮುದ್ದೀನ್ ಅಲ್ ಅಝ್ ಹರಿ ಅಲ್ ಖಾಸಿಮಿ ಉಸ್ತಾದರು ಆಗಮಿಸಲಿರುವರು. ದಾರುನ್ನೂರ್ ಯು ಎ ಇ ಯಲ್ಲಿ ಕಳೆದ 5 ವರ್ಷಗಳಿಂದ ನಡೆಸಿದ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು. ಕಾರ್ಯಕ್ರಮ ನಡೆಯಲ್ಪಡುವ ಸ್ಥಳದ ಬಗ್ಗೆ ಬಳಿಕ ಮಾಹಿತಿ ನೀಡಲಾಗುವುದು. 

ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು ಸ್ವಾಗತ ಸಮಿತಿಯೊಂದನ್ನು ರಚಿಸಲಾಯಿತು.

ಉಪದೇಶಕರು: ಸಯ್ಯದ್ ಅಸ್ಕರ್ ಅಲಿ ತಂಞಳ್ ಕೋಲ್ಪೆ , ಮಹಮ್ಮದ್ ಮುಸ್ತಾಕ್ ಕದ್ರಿ ,  ಸಂಶುದ್ದೀನ್ ಸೂರಲ್ಪಾಡಿ ,  ಸಲೀಂ ಅಲ್ತಾಫ್ ಫರಂಗಿಪೇಟೆ , ರವೂಫ್ ಹಾಜಿ ಕೈಕಂಬ  ಅಬ್ದುಲ್ ಸಲಾಂ ಬಪ್ಪಳಿಗೆ, ಚೇರ್ಮೇನ್  :  ಬದ್ರುದ್ದೀನ್ ಹೆಂತಾರ್, ಕಾರ್ಯದರ್ಶಿ :  ಮಹಮ್ಮದ್ ರಫೀಕ್ ಸುರತ್ಕಲ್, ಕೋಶಾಧಿಕಾರಿ :  ಸಿರಾಜ್ ಬಿ.ಸಿ ರೋಡ್, ಕನ್ವೀನರ್ ಗಳು:  ಮಹಮ್ಮದ್ ರಫೀಕ್ ಆತೂರು, ಮಹಮ್ಮದ್ ಮಾಡಾವು , ಸಾಜಿದ್  ಬಜ್ಪೆ, ಸಮೀರ್ ಇಬ್ರಾಹಿಂ ಕಲ್ಲರೆ,   ಹನೀಫ್ ಕೆ.ಪಿ ಮೂಡಬಿದ್ರಿ ,  ನವಾಝ್ ಬಿ.ಸಿ ರೋಡ್ ,  ಅಶ್ರಫ್ ಪರ್ಲಡ್ಕ ,  ಅಶ್ರಫ್ ಬಾಳೆಹೊನ್ನೂರ್ ,  ಅನ್ಸಾಫ್ ಪಾತೂರು ,  ಸಫಾ ಇಸ್ಮಾಯಿಲ್ ಬಜ್ಪೆ,  ಅಶ್ರಫ್ ಪಾವೂರ್,  ನಾಸಿರ್ ಬಪ್ಪಳಿಗೆ ,  ಅಬ್ದುಲ್ ರಝಾಕ್ ಸೊಂಪಾಡಿ ,  ಅಶ್ರಫ್ ಬಾಂಬಿಲ ,  ನವಾಝ್ ಮನಲ್ ,  ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ  ,  ಉಸ್ಮಾನ್ ಕೆಮ್ಮಿಂಜೆ ,  ಇಫ್ತಿಕಾರ್ ಅಡ್ಯಾರ್ ಕಣ್ಣೂರ್ , ಸಾಹುಲ್ ಬಿ.ಸಿ ರೋಡ್,  ಅಬ್ದುಲ್ ರಝಾಕ್ ಕರೈ ,  ಸುಹೈಲ್ ಚೊಕ್ಕಬೆಟ್ಟು ,  ತಾಹಿರ್ ಹೆಂತಾರ್ ,  ಇಸ್ಮಾಯಿಲ್ ಮುಂಧೀರ್ ತೋಡಾರ್ ,  ಮುನೀರ್ ಕಾಂಞಂಗಾಡ್,  ಜಬ್ಬಾರ್ ಕಲ್ಲಡ್ಕ,  ಉಸ್ಮಾನ್ ಮರೀಲ್ ,  ರಿಯಾಝ್ ಪಟ್ಟಾಡಿ ,  ಇಬ್ರಾಹಿಂ ಕುಂಡಾಜೆ ,  ಜಾಬಿರ್ ಬಪ್ಪಳಿಗೆ ,  ಮಹಮ್ಮದ್ ಶಬೀರ್ ಫರಂಗಿಪೇಟೆ,  ಸಂಶುದ್ದೀನ್ ಹಮೀದ್ ಮೂಡಬಿದ್ರಿ ಮೊದಲಾದವರನ್ನು ಆರಿಸಲಾಯಿತು.

 ಮಹಮ್ಮದ್ ರಫೀಕ್ ಆತೂರು ಸ್ವಾಗತಿಸಿ, ಅಶ್ರಫ್ ಪರ್ಲಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News