×
Ad

ಅಕ್ರಮ ಜಾನುವಾರು ಸಾಗಾಟ ಆರೋಪ: ಇಬ್ಬರ ಬಂಧನ

Update: 2019-10-03 23:26 IST

ಉಪ್ಪಿನಂಗಡಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ  ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ, ಸಾಗಾಟಕ್ಕೆ ಬಳಸಿದ ವಾಹನ ಸಹಿತ ಒಂದು ದನ ಹಾಗೂ 2 ಕರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೇರಳದ ಕಣ್ಣೂರಿನ ಪ್ರದೀಶ್ ಹಾಗೂ ರಜೀಶ್ ಬಂಧಿತ ಆರೋಪಿಗಳು.

ಇವರು ಮಹೇಂದ್ರಾ ಗೂಡ್ಸ್ ಟೆಂಪೋದಲ್ಲಿ ನೆಲ್ಯಾಡಿಯಿಂದ ಒಂದು ದನ ಹಾಗೂ ಎರಡು ಕರುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ಇಲ್ಲಿನ ಹಳೆಗೇಟು ಎಂಬಲ್ಲಿ ಇವರ ವಾಹನ ತಡೆದು  ಜಾನುವಾರು, ಸಾಗಾಟಕ್ಕೆ ಬಳಸಿದ ವಾಹನ ಸಮೇತ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.   

    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News