×
Ad

ಮಂಗಳೂರು: ನೂತನ ‘ವೇಫ್ಲ್ ಆ್ಯಂಡ್ ಬೈಟ್ಸ್’ ಶುಭಾರಂಭ

Update: 2019-10-04 19:11 IST

ಮಂಗಳೂರು, ಅ. 4: ನೂತನ ‘ವೇಫ್ಲ್ ಆ್ಯಂಡ್ ಬೈಟ್ಸ್’ ಕೆಫೆಯನ್ನು ನಗರದ ವೆಲೆನ್ಸಿಯ ರಸ್ತೆಯಲ್ಲಿನ ಮೋರ್ ಸೂಪರ್‌ ಮಾರ್ಕೆಟ್ ಪಕ್ಕದ ಮಳಿಗೆಯಲ್ಲಿ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಶುಕ್ರವಾರ ಸಂಜೆ ಉದ್ಘಾಟಿಸಿದರು. ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ದುಆಗೈದರು.

ನಂತರ ಮಾತನಾಡಿದ ಶಾಸಕ ಯು.ಟಿ. ಖಾದರ್, ನೂತನ ಕೆಫೆಯನ್ನು ತೆರೆಯುವ ಮೂಲಕ ಯುವಕರು ಹೊಸ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯುವಜನಾಂಗದ ಉತ್ತಮ ಪ್ರಯತ್ನ ಇದಾಗಿದೆ. ಗ್ರಾಹಕರಿಗೆ ಪೌಷ್ಟಿಕಾಂಶದ ಸಿಹಿತಿನಿಸು, ತಂಪು ಪಾನೀಯ, ಖಾದ್ಯಗಳನ್ನು ಪೂರೈಕೆ ಮಾಡಲು ಗಮನಹರಿಸಬೇಕು. ಕೆಫೆಗೆ ಭೇಟಿ ನೀಡುವ ಗ್ರಾಹಕರು ಪುನಃ ಬರುವಂತಾಗಲು ಗುಣಮಟ್ಟ ಕಾಯ್ದು ಕೊಳ್ಳಬೇಕು. ಗ್ರಾಹಕರು ಸಂತೃಪ್ತರಾದರೆ ವ್ಯಾಪಾರವೂ ವೃದ್ಧಿಸುತ್ತದೆ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕಡಿಮೆ ಜಾಗದಲ್ಲಿ ಹೆಚ್ಚು ವ್ಯಾಪಾರ ಮಾಡುವ ಹೊಸ ಉದ್ಯಮಗಳತ್ತ ಯುವಕರು ಚಿತ್ತ ಹರಿಸಬೇಕು. ರಾಹಿಲ್ ಹಂಝ ರಶೀದ್ ಮಾಲಕತ್ವದ ನೂತನ ‘ವೇಫ್ಲ್ ಆ್ಯಂಡ್ ಬೈಟ್ಸ್’ ಶುಭಾರಂಭಗೊಂಡಿದ್ದು, ಕೇಕ್ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆನ್‌ಲೈನ್ ಮೂಲಕವೂ ಬೇಕರಿಯ ಸೇವೆ ಲಭ್ಯವಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಹೊಂದಿಕೊಂಡು ವ್ಯಾಪಾರಕ್ಕೆ ಯುವಕರು ಮುಂದಾಗಿರುವುದು ಮಾದರಿಯಾಗಿದೆ ಎಂದರು.

ಯುವಕರು ಶ್ರಮ ವಹಿಸಿ ಹೊಸ ಉದ್ಯಮ ನಡೆಸಿಕೊಂಡು ಹೋದರೆ ಯಶಸ್ಸು ಖಂಡಿತ ಲಭಿಸುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ಷಣಕ್ಷಣವೂ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಉತ್ಪನ್ನದ ಗುಣಮಟ್ಟ, ಸ್ವಾದದಲ್ಲೂ ಸ್ಪರ್ಧಾತ್ಮಕತೆಯಿದೆ. ವೆಲೆನ್ಸಿಯದಂತಹ ಸುಶಿಕ್ಷಿತ ಪ್ರದೇಶದಲ್ಲೇ ನೂತನ ಕೆಫೆ ತೆರೆದಿರುವುದು ಉದ್ಯಮಕ್ಕೆ ಬಲ ನೀಡಿದಂತಾಗಿದೆ. ನವ ಉದ್ಯಮವು ಅಭಿವೃದ್ಧಿಯ ಉತ್ತುಂಗಕ್ಕೆ ಸಾಗಲಿ ಎಂದು ಅವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಮಸ್ಜಿದುಲ್ ತಕ್ವಾ ಖತೀಬ್ ಅಬ್ದುಲ್ ರೆಹಮಾನ್ ಸಖಾಫಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಈದ್ಗಾ ಮಸೀದಿಯ ಖತೀಬ್ ಸದಕತುಲ್ ನದ್ವಿ, ಕಾಪ್ರಿಗುಡ್ಡದ ಜಲಾಲ್ ಮಸೀದಿಯ ಖತೀಬ್ ಮುಸ್ತಾಕ್ ಮದನಿ, ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ರಶೀದ್ ಹಾಜಿ ಪುತ್ರ ಹಾಗೂ ಕೆಫೆ ಮಾಲಕ ರಾಹಿಲ್ ಹಂಝ ರಶೀದ್, ಆರ್ಚಿಟೆಕ್ಟ್ ಆಸಿಫ್, ರಾಹಿಫ್ ಅಬ್ಬಾಸ್, ರಿಫಾತ್ ಅಹ್ಮದ್, ಡೆಂಜಿಲ್ ಜೇಸುದಾಸ್, ಸಿ.ಮಾಹಿನ್, ಜೋಹರ್ ಬಾವ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷ ಖಾದ್ಯಗಳು: ಥಿಕ್ ಶೇಕ್ಸ್, ಮೊಜಿಟೊಸ್, ಸ್ಮೂತೀಸ್, ಮೊಕ್‌ಟೇಲ್ಸ್, ಕೋಲ್ಡ್ ಕಾಫಿ, ಹಾಟ್ ಬೆವರೆಸ್, ಬೆಲ್ಜಿಯನ್ ವಾಫಲ್ಸ್, ಡಚ್ ಪ್ಯಾನ್‌ಕೇಕ್ಸ್, ಐಸ್-ಕ್ರೀಮ್ಸ್ ಸೇರಿದಂತೆ ಬಗೆಬಗೆಯ ಖಾದ್ಯಗಳು ಲಭ್ಯ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News