ಸಿ.ಎ. ಫಲಿತಾಂಶ: ಉಡುಪಿಗೆ ಎರಡು ರ್ಯಾಂಕ್
ಉಡುಪಿ, ಅ.4: ಕಳೆದ ಮೇ-ಜೂನ್ ತಿಂಗಳಲ್ಲಿ ನಡೆದ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉಡುಪಿ ಶಾಖೆಯ ಇಬ್ಬರು ವಿದ್ಯಾರ್ಥಿಗಳಾದ ಪ್ರವೀಣ್ ಪೈ ಮತ್ತು ಅಧಿತಿ ಶಾನುಭಾಗ್ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 31ನೇ ಹಾಗೂ 48ನೇ ರ್ಯಾಂಕ್ ಪಡೆದಿದ್ದಾರೆ.
ಹಳೆ ವ್ಯವಸ್ಥೆಯಲ್ಲಿ ಮೂವರು ವಿದ್ಯಾರ್ಥಿಗಳು ಚಾರ್ಟಡ್ ಅಕೌಂಟೆನ್ಸಿ ಕೋರ್ಸ್‌ನ ಎರಡೂ ಗ್ರೂಪ್‌ಗಳಲ್ಲೂ ತೇರ್ಗಡೆಗೊಂಡಿದ್ದರೆ, ಹತ್ತು ಮಂದಿ ಮೊದಲ ಗ್ರೂಪ್‌ನ್ನೂ, 22 ಮಂದಿ ವಿದ್ಯಾರ್ಥಿಗಳು ಎರಡನೇ ಗ್ರೂಪ್‌ನ್ನೂ ಪೂರ್ಣಗೊಳಿಸಿದ್ದಾರೆ.
ಸಿ.ಎ. ಹೊಸ ವ್ಯವಸ್ಥೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಿ.ಎ. ಕೋರ್ಸ್‌ನ ಎರಡೂ ಗ್ರೂಪ್‌ಗಳಲ್ಲಿ ತೇರ್ಗಡೆಗೊಂಡಿದ್ದರೆ, ಇಬ್ಬರು ಮೊದಲ ಗ್ರೂಪ್‌ನ್ನು ಹಾಗೂ ನಾಲ್ವರು ವಿದ್ಯಾರ್ಥಿಗಳು ಎರಡನೇ ಗ್ರೂಪ್‌ನ್ನು ಪೂರ್ಣಗೊಳಿಸಿದ್ದಾರೆ.
ಒಟ್ಟಾರೆಯಾಗಿ 22 ಮಂದಿ ವಿದ್ಯಾರ್ಥಿಗಳು ಈ ವರ್ಷದಲ್ಲಿ ಸಿ.ಎ. ಕೋರ್ಸ್‌ನಲ್ಲಿ ತೇರ್ಗಡೆಗೊಂಡಿದ್ದು ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಯ ಉಡುಪಿ ಶಾಖೆ ಅಧ್ಯಕ್ಷ ಸಿ.ಎ.ನರಸಿಂಹ ನಾಯ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.