×
Ad

ಶಿಕ್ಷಕ ದೇಶ ಕಟ್ಟುವ ಶಿಲ್ಪಿ: ಕುಲಪತಿ ಯಡಪಡಿತ್ತಾಯ

Update: 2019-10-04 21:27 IST

ಮಂಗಳೂರು, ಅ.4: ವೃತ್ತಿ ಇರಲಿ, ಪ್ರವೃತ್ತಿ ಇರಲಿ ಸದಾ ಹಸನ್ಮುಖಿಯಾಗಿ ಲವಲವಿಕೆಯಿಂದ ಸಮಾಜಮುಖಿಯಾಗಿದ್ದರೆ ಮಾತ್ರ ಶಿಕ್ಷಕ ದೇಶ ಕಟ್ಟುವ ಶಿಲ್ಪಿಯಾಗುತ್ತಾನೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಶಿಕ್ಷಕ-ಶಿಕ್ಷಣ ರಂಗ (ಶಿಶಿರ) ಮಂಗಳೂರು ವತಿಯಿಂದ ನಗರದ ಮಂಗಳೂರು ವಿವಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಶಿರ ಮಂಗಳೂರು ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು, ತುಳು ಸ್ನಾತಕೋತ್ತರ ಅಧ್ಯಯನದ ಸಂಯೋಜಕ ಡಾ.ಮಾಧವ ಎಂ.ಕೆ. ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಿಶಿರದ ಉಪಾಧ್ಯಕ್ಷ ಜಿ.ಕೆ.ಭಟ್, ಕೋಶಾಧಿಕಾರಿ ಚೇತನ್ ಆರ್., ಉಪನ್ಯಾಸಕ ಶ್ಯಾಮ್ ಪ್ರಸಾದ್, ಶಿವಾನಂದ ಕರ್ಕೇರ ಉಪಸ್ಥಿತರಿದ್ದರು. ಶಿಶಿರದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತಿಸಿದರು. ಕಾರ್ಯದರ್ಶಿ, ಉಪನ್ಯಾಸಕಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಶಿರದ ಸದಸ್ಯರಾದ ಜ್ಞಾನೇಶ್ವರಿ ಮತ್ತು ಹರೀಶ್ ಸಹಕರಿಸಿದರು. ವಿಜಯಲಕ್ಷ್ಮಿ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News