×
Ad

ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟನೆ

Update: 2019-10-04 21:50 IST

ಉಡುಪಿ, ಅ.4: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬ್ರಹ್ಮಾವರ ಹಾಗೂ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.

ಆಕಾಶಕ್ಕೆ ಬಲೂನು ಹಾರಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಕ್ರೀಡೆ ಶಿಸ್ತುಗಳನ್ನು ಕಲಿಸುತ್ತದೆ. ಮಕ್ಕಳು ದೈಹಿಕವಾಗಿ ಸದೃಢರಾದರೆ ಮಾನಸಿಕವಾಗಿ ಸಮರ್ಥರಾಗುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯ ಜನಾರ್ದನ ತೋನ್ಸೆ ಕ್ರೀಡಾ ಧ್ವಜಾ ರೋಹಣಗೈದು, ಕ್ರೀಡೆ ನಮ್ಮಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ. ವಿದ್ಯಾರ್ಥಿ ಗಳು ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಸದಾ ಕ್ರಿಯಾಶೀಲ ರಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಂದಾರ್ತಿ, ಪೆರ್ಡೂರು, ಬ್ರಹ್ಮಾವರ ಹಾಗೂ ಮಣಿಪಾಲ ಹೋಬಳಿಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ಧ್ವಜವಂದನೆ ಸ್ವೀಕರಿಸಿದರು. ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಕ್ರೀಡಾಜ್ಯೋತಿ ಪ್ರಜ್ವಲನಗೊಳಿಸಿದರು.

ಕೆಮ್ಮಣ್ಣು ಗ್ರಾಪಂ ಅಧ್ಯಕ್ಷೆ ಫೌಜಿಯಾ ಸಾಧಿಕ್, ತೋನ್ಸೆ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಇರ್ಷಾದ್, ಉದ್ಯಮಿ ಎಂ.ಎ.ಮೌಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್.ಪ್ರಕಾಶ್, ಬಿ.ಆರ್.ಸಿ. ಸಂಯೋಜಕ ನಾಗರಾಜ್, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಅನುದಾನಿತ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಾಂತಾ ರಾಜ ಶೆಟ್ಟಿ, ಸಾಲಿಹಾತ್ ಟ್ರಸ್ಟಿಗಳಾದ ಹುಸೇನ್ ಮಾಸ್ಟರ್, ಅರ್ಷದ್ ಉಡುಪಿ, ಸಾಲಿಹಾತ್ ಶಾಲಾ ಮುಖ್ಯಸ್ಥರುಗಳಾದ ಲವೀನಾ ಕ್ಲಾರಾ, ಸಮೀನಾ ನಝೀರ್ ಉಪಸ್ಥಿತರಿದ್ದರು.

ಈ ಸಂದರ್ಭ ಉಡುಪಿ ಜಿಲ್ಲಾ ದೈಹಿಕ ಪರಿವೀಕ್ಷಣಾಧಿಕಾರಿ ಮಧುಕರ ಹಾಗೂ ಗುಂಡ್ಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಗಣಪತಿ ನಾರಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಸಾಧು ಶೇರಿಗಾರ್, ಜ್ಯೋತಿ ಚಿತ್ರಪಾಡಿ, ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ ಪೂಜಾರಿ, ಗಣೇಶ ಕುಕ್ಕೆಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಬ್ರಹ್ಮಾವರ ವಲಯ ದೈಹಿಕ ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಸಾಲಿಹಾತ್ ಸಾಲಿಹಾತ್ ಕಾರ್ಯದರ್ಶಿ ಜಿ. ಇಮ್ತಿಯಾಝ್ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ವಂದಿಸಿದರು. ಶಿಕ್ಷಕ ಸತೀಶ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News