ಅಕ್ರಮ ಜಾನುವಾರು ಸಾಗಾಟ: ಮೂವರ ಸೆರೆ
Update: 2019-10-04 21:52 IST
ಕಾರ್ಕಳ, ಅ.4: ಕಳವುಗೈದ ಜಾನುವಾರನ್ನು ಅಕ್ರಮವಾಗಿ ಮಹೀಂದ್ರಾ ಪಿಕ್‌ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಮೂವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಅ.4ರಂದು ಸಂಜೆ ವೇಳೆ ನೂರಾಳ್‌ಬೆಟ್ಟು ಶಾಲೆಯ ಬಳಿ ಬಂಧಿಸಿದ್ದಾರೆ.
ಹೊಸ್ಮಾರ್ ಕರಿಂಬ್ಯಾಲು ನಿವಾಸಿ ತೌಸಿಫ್(26), ನವಾಜ್(24), ಮೈಯದ್ದಿ(28), ನೂರಾಳ್‌ಬೆಟ್ಟು ಕೇಶವ್(45) ಎಂಬವರು ಬಂಧಿತ ಆರೋಪಿಗಳು. ಇವರು ನೂರಾಳ್‌ಬೆಟ್ಟುವಿನ ರಸ್ತೆ ಬದಿ ಮೇಯಲು ಬಿಟ್ಟಿದ್ದ ದನವನ್ನು ಕಳವುಗೈದು ವಾಹನದಲ್ಲಿ ಅಕ್ರಮವಾಗಿ ಸಾಗಿಸು ತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ವಾಹನವನ್ನು ತಡೆದು ನಿಲ್ಲಿಸಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಿಂದ ಒಂದು ಬಿಳಿ ಬಣ್ಣದ ದನ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.