×
Ad

ಬುಲ್‌ಟ್ರಾಲಿಂಗ್, ಪೇರ್‌ಟ್ರಾಲಿಂಗ್ ಮೀನುಗಾರಿಕೆ ಪದ್ಧತಿ ನಿಷೇಧ

Update: 2019-10-04 21:53 IST

ಉಡುಪಿ, ಅ.4: ರಾಜ್ಯ ಸರಕಾರವು ಸಮುದ್ರದಲ್ಲಿ ಕೆಲವೊಂದು ತರಹದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇಧಿಸಿದೆ. ಆದಾಗ್ಯೂ ಸಹ ಇತ್ತೀಚಿನ ದಿನಗಳಲ್ಲಿ ಸಮುದ್ರದಲ್ಲಿ ನಿಷೇಧಿತ ಮೀನುಗಾರಿಕೆ ಪ್ರಮುಖವಾಗಿ ಬುಲ್‌ಟ್ರಾಲ್ ಅಥವಾ ಪೇರ್‌ಟ್ರಾಲ್ ಮಾಡುತ್ತಿರುವುದಾಗಿ ದೂರುಗಳು ಸ್ವೀಕೃತವಾಗಿರುತ್ತವೆ.

ಈ ಬಗ್ಗೆ ಇಲಾಖಾಧಿಕಾರಿಗಳು ಗುರುವಾರ ಸಂಜೆ ಕರಾವಳಿ ಕಾವಲು ಪಡೆಯ ದೋಣಿಯಲ್ಲಿ, ಸಿಬ್ಬಂದಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದಾಗ ತಿರುಮಲ, ನೋಂದಣಿ ಸಂಖ್ಯೆ:IND-KA-02-MM-3060 ಮತ್ತು ನೋಂದಣಿ ಸಂಖ್ಯೆ ಗೋಚರವಾಗದ ಇನ್ನೊಂದು ಬೋಟ್ ಬುಲ್‌ಟ್ರಾಲಿಂಗ್ ನಲ್ಲಿ ತೊಡಗಿರುವುದು ಕಂಡುಬಂದಿದೆ. ವಾಯುಪುತ್ರ ಮತ್ತು ಕೃಷ್ಣ ಪಾರಿಜಾತ ಬೋಟುಗಳು ಬುಲ್‌ಟ್ರಾಲಿಂಗ್‌ನಲ್ಲಿ ತೊಡಗಿರುವ ಬಗ್ಗೆ ವೀಡಿಯೋ ದಾಖಲೆ ಸ್ವೀಕೃತವಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಬುಲ್‌ಟ್ರಾಲಿಂಗ್, ಪೇರ್‌ಟ್ರಾಲಿಂಗ್ ಇತ್ಯಾದಿ ನಿಷೇಧಿತ ಮೀನುಗಾರಿಕಾ ಪದ್ಧತಿ ಅನುಸರಿಸು ತ್ತಿರುವ ಬೋಟುಗಳ ಮೇಲೆ ಮೀನುಗಾರಿಕೆ ಇಲಾಖೆಯಿಂದ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಕ ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News