×
Ad

ರೆಡ್‌ಕ್ರಾಸ್ ವತಿಯಿಂದ ನೆರೆ ಪರಿಹಾರ ಸಾಮಗ್ರಿ ವಿತರಣೆ

Update: 2019-10-04 21:55 IST

ಉಡುಪಿ, ಅ.4: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅ.5ರಂದು ಬೆಳಗ್ಗೆ 9:30ಕ್ಕೆ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗ ವಿತರಣಾ ಸಮಾರಂಭ ನಡೆಯಲಿದೆ.

ಜಿಲ್ಲೆಯಲ್ಲಿ ಆಯ್ದ 40ಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ಪರಿಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಜಗದೀಶ್ ವಿತರಿಸಲಿರುವರು. ಈ ಸಂದರ್ದಲ್ಲಿ ರೆಡ್‌ಕ್ರಾಸ್‌ನ ಬಸ್ರೂರು ರಾಜೀವ್ ಶೆಟ್ಟಿ,ಡಾ. ಉಮೇಶ್ ಪ್ರು, ಡಾ.ಅಶೋಕ್ ಕುಮಾರ್ ವೈ.ಜಿ, ಟಿ.ಚಂದ್ರಶೇಖರ್, ಕೆ.ಬಾಲಕೃಷ್ಣ ಶೆಟ್ಟಿ ಹಾಗೂ ಇತರರು ಉಪಸ್ಥಿತರಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News