ಅಂದರ್ ಬಾಹರ್: 9 ಮಂದಿ ಬಂಧನ
Update: 2019-10-04 22:01 IST
ಮಣಿಪಾಲ, ಅ.4: ಈಶ್ವರ ನಗರದ ಕೃಷ್ಣಲೀಲಾ ಕಟ್ಟಡದ ಸಂಕೀರ್ಣ ದಲ್ಲಿರುವ ಬ್ಲೇಜ್ ರಿಕ್ರೀಯೇಶನ್ ಕ್ಲಬ್ನಲ್ಲಿ ಅ.3ರಂದು ರಾತ್ರಿ 10ಗಂಟೆ ಸುಮಾರಿಗೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 9 ಮಂದಿ ಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಭರತ್ ಶೆಟ್ಟಿ, ದಿನೇಶ್, ಸೂರಜ್ ಸಾಲಿಯಾನ್, ಶಫಿವುಲ್ಲಾ, ಸಂತೋಷ್, ಶಾಹಿದ್, ನಾಜೀರ್, ಮೆಲ್ವಿನ್ ಲೋಬೊ, ಚೇತನ್‌ರಾಜ್ ಶೆಟ್ಟಿ ಬಂಧಿತ ಆರೋಪಿಗಳು. ಇವರಿಂದ 24,630ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.