ಡಿವೈಡರ್‌ಗೆ ಲಾರಿ ಢಿಕ್ಕಿ: ಸಾವಿರಾರು ರೂ. ನಷ್ಟ
Update: 2019-10-04 22:03 IST
ಕೋಟ, ಅ.4: ಮಣೂರು ಗ್ರಾಮದ ಕರಾವಳಿ ಹೋಟೆಲ್ ಎದುರುಗಡೆ ಅ.4ರಂದು ಬೆಳಗಿನ ಜಾವ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ವಿಭಾಜಕ ಮತ್ತು ಅದಕ್ಕೆ ಅಳವಡಿಸಿದ ಕಬ್ಬಿಣದ ಗ್ರಿಲ್ ಗಳು ಸಂಪೂರ್ಣ ಜಖಂಗೊಂಡಿದ್ದು, ಇದರಿಂದ ನವಯುಗ ಕಂಪೆನಿಗೆ 90,000 ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.