×
Ad

ಮಳೆಯಿಂದ ರಸ್ತೆ ಹಾನಿ: 27 ಕೋಟಿ ರೂ. ಅನುಮೋದನೆ

Update: 2019-10-04 22:06 IST

ಮಂಗಳೂರು, ಅ.4: ದ.ಕ. ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದ ರಾಜ್ಯ ಹೆದ್ದಾರಿ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಸೇತುವೆಗಳು ಹಾನಿಗೊಂಡಿದ್ದು, ದುರಸ್ತಿಗಾಗಿ 27.14 ಕೋಟಿ ರೂ. ಅನುಮೋದನೆ ದೊರೆತಿದೆ.

ಹಾನಿಗೊಳಗಾದ ರಸ್ತೆ, ಸೇತುವೆ ದುರಸ್ತಿ ಕೈಗೊಂಡ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಅಗತ್ಯವಿದೆ. ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗದ ಅಧೀನದ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಗಂಡಿ ಹಾಗೂ ಸುಳ್ಯ ಉಪವಿಭಾಗಗಳಿಗೆ ನೀಡಿರುವ ಅನುದಾನವನ್ನು ಪರಿಮಾಣಕ್ಕೆ ಅನುಗುಣವಾಗಿ ಮರುಹಂಚಿಕೆ ಮಾಡಿ ಕ್ರಿಯಾಯೋಜನೆ ತಯಾರಿಸಲಾಗಿದೆ.

ಲೋಕೋಪಯೋಗಿ ಮಂಗಳೂರು ವಿಭಾಗಕ್ಕೆ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಸೇತುವೆ ದುರಸ್ತಿಯ 71 ಕಾಮಗಾರಿಗಳಿಗೆ 10.32 ಕೋಟಿ ರೂ. ಮತ್ತು ಜಿಲ್ಲಾ ಮುಖ್ಯ ರಸ್ತೆ ಹಾಗೂ ಸೇತುವೆ ದುರಸ್ತಿಯ 127 ಕಾಮಗಾರಿಗಳಿಗೆ 16.83 ಕೋಟಿಯಂತೆ ಒಟ್ಟು 198 ಕಾಮಗಾರಿಗಳಿಗೆ 27.14 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಲಾಗಿದೆ. ಈಗಾಗಲೇ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News