ಅ.7: ಮೇರಿ, ಜಪಮಾಲೆ ಮಾತೆಯ ವಾರ್ಷಿಕೋತ್ಸವ
Update: 2019-10-04 22:17 IST
ಮಂಗಳೂರು, ಅ. 4: ಜೆಪ್ಪುವಿನ ಸಂತ ಆಂತೋನಿ ಅಶ್ರಮ, ವೆಲೆನ್ಸಿಯಾದ ಸಂತ ವಿನ್ಸೆಂಟ್ ಫೆರೆರ್ ದೇವಾಲಯ, ಜೆಪ್ಪುವಿನ ಸಂತ ಜೋಸೆಫ್ ದೇವಾಲಯ ಮತ್ತು ಸಂತ ರೀತ ದೇವಾಲಯ ಕಾಸ್ಸಿಯಾದ ಜಂಟಿ ಆಶ್ರಯದಲ್ಲಿ ಮೇರಿ ಜಪಮಾಲೆಯ ವಾರ್ಷಿಕೋತ್ಸವವು ಅ7ರಂದು ನಡೆಯಲಿದೆ. ಅಂದು ಸಂಜೆ 5:30ಕ್ಕೆ ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಕಾಸ್ಸಿಯಾ ದೇವಾಲಯದಲ್ಲಿ ಇತರ ಧರ್ಮಗುರುಗಳ ಜೊತೆ ಬಲಿಪೂಜೆ ಅರ್ಪಿಸುವರು.
ಬಳಿಕ ಕಾಸ್ಸಿಯಾ ದೇವಾಲಯದಿಂದ ಜೆಪ್ಪು ಸಂತ ಅಂತೋನಿ ಆಶ್ರಮ ತನಕ ಮೆರವಣಿಗೆಯಲ್ಲಿ ಅಲಂಕರಿಸಿದ ಜಪಮಾಲೆ ಮಾತೆ ಮೇರಿಯಮ್ಮನವರ ಪ್ರತಿಮೆಯನ್ನು ತರಲಾಗುವುದು. ಮೆರವಣಿಗೆಯಲ್ಲಿ ಜಪಮಾಲೆ ಪ್ರಾರ್ಥನೆ, ಹಬ್ಬಕ್ಕೆ ಸಂಬಂಧಪಟ್ಟ ಗೀತೆಗಳು ಮತ್ತು ಮೇರಿಮಾತೆ ಪ್ರಪಂಚದ ವಿವಿಧೆಡೆ ಕಾಣಿಸಿಕೊಂಡ ದೃಶ್ಯಾವಳಿಗಳು ಇರಲಿವೆ. ಜೆಪ್ಪುಸಂತ ಜೋಸೆಫ್ ಗುರುಮಠದ ಪ್ರಾಧ್ಯಾಪಕ ವಂ.ಡಾ. ಲಿಯೊ ಲಸ್ರಾದೊ ಪ್ರವಚನ ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.