ಪೊಟ್ಟೊಳಿಕೆ: ಸಿಡಿಲು ಬಡಿದು ಮಸೀದಿಗೆ ಹಾನಿ

Update: 2019-10-04 17:17 GMT

ಕೊಣಾಜೆ: ನರಿಂಗಾನ ಗ್ರಾಮದ ಪೊಟ್ಟೊಳಿಕೆ ಎಂಬಲ್ಲಿಯ ಬಿಲಾಲ್ ಜುಮ್ಮಾ ಮಸೀದಿಗೆ ಶುಕ್ರವಾರ ಬೆಳಗ್ಗೆ ಸಿಡಿಲು ಅಪ್ಪಳಿಸಿ ಹಾನಿಯಾದ ಘಟನೆ ಸಂಭವಿಸಿದೆ.

ಶುಕ್ರವಾರ ಬೆಳಗ್ಗೆ  ಸಿಡಿಲು ಬಿಲಾಲ್ ಮಸೀದಿಯ ಮಿನಾರ್ ಗೆ ಬಡಿದಿದೆ. ಇದರಿಂದ ಮಿನಾರ್ ನ ತುದಿಯು ತುಂಡಾಗಿ ಕೆಳಗೆ ಬಿದ್ದಿದೆ. ಅಲ್ಲದೆ ಇದರಿಂದ ಮಸೀದಿಯ ಕಿಟಕಿ ಗಾಜುಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಬೆಳಿಗ್ಗೆ 5.20ರ ವೇಳೆಗೆ ಸ್ಥಳೀಯರು ನಮಾಝ್ ಮುಗಿಸಿ  ತೆರಳಿದ್ದರು ಹಾಗೂ ಕೆಲವರು ಅಲ್ಲೇ ಉಳಿದುಕೊಂಡಿದ್ದರು. ಆದರೆ ಅದೃಷ್ಠವಶಾತ್ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News