ಕ್ಷಿಪಣಿ ದಾಳಿ ಎಚ್ಚರಿಕೆ ವ್ಯವಸ್ಥೆ ನಿರ್ಮಿಸಲು ಚೀನಾಕ್ಕೆ ನೆರವು: ರಶ್ಯ

Update: 2019-10-04 17:36 GMT

ಮಾಸ್ಕೊ, ಅ. 4: ಕ್ಷಿಪಣಿ ದಾಳಿ ಎಚ್ಚರಿಕೆ ವ್ಯವಸ್ಥೆಯೊಂದನ್ನು ನಿರ್ಮಿಸಲು ರಶ್ಯವು ಚೀನಾಕ್ಕೆ ನೆರವು ನೀಡಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದರು. ಈ ವ್ಯವಸ್ಥೆಯನ್ನು ಸದ್ಯ ರಶ್ಯ ಮತ್ತು ಅಮೆರಿಕಗಳು ಮಾತ್ರ ಹೊಂದಿವೆ.

‘‘ಇದೊಂದು ಮಹತ್ವದ ವಿಷಯವಾಗಿದೆ. ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಕ್ಷಣಾ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಿದೆ’’ ಎಂದು ರಶ್ಯದ ರಿಸಾರ್ಟ್ ಪಟ್ಟಣ ಸೋಚಿಯಲ್ಲಿ ನಡೆದ ಅಂತರ್‌ರಾಷ್ಟ್ರೀಯ ರಾಜಕೀಯ ಸಮ್ಮೇಳನದಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News