×
Ad

ಮಂಗಳೂರು: ಪ್ಲಾಸಿಕ್ ಬಳಕೆಯ ವಿರುದ್ಧ ಜನಜಾಗ್ರತಿ ಕಾರ್ಯಕ್ರಮ

Update: 2019-10-04 23:20 IST

ಮಂಗಳೂರು : ದೇಶದಾದ್ಯಂತ ಅ. 2 ರಿಂದ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದ ಮಾಡಲಾಗಿದೆ. ಜನರಲ್ಲಿ ಪ್ಲಾಸಿಕ್  ಬಳಕೆಯ ವಿರುದ್ಧ ಜನಜಾಗ್ರತಿ ಮೂಡಿಸಲು ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಹಾಗೂ ವಿವಿಧ ಸಂಘ ಸಂಸ್ಥೆಗಳ  ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ರಮ ಮಂಗಳೂರುನಲ್ಲಿ ಹಮ್ಮಿಕೊಳ್ಳಲಾಗಿದೆ .

ಇಂದು ನಗರದ ಕೇಂದ್ರ ಮಾರುಕಟ್ಟೆ ಬಳಿ ಜಾಗ್ರತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಅವರು ಈ ಜಾಗ್ರತಿ ಅಭಿಯಾನಕ್ಕೆ ಚಾಲನೆ ನೀಡಿದರು .

ಕೇಂದ್ರ ಮಾರುಕಟ್ಟೆ ಪ್ರದೇಶದಲ್ಲಿ ಹಲವಾರು ಮಂದಿ ಗ್ರಾಹಕರು ಹಣ್ಣು ತರಕಾರಿ ಗಳನ್ನೂ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಂಡು ಹೋಗುವ ದ್ರಶ್ಯ ಕಂಡು ಬಂದಿತ್ತು .ಅಂತಹ ಪ್ಲಾಸ್ಟಿಕ್ ಬ್ಯಾಗ್ ಪಡೆದು ಕೊಂಡು ಅವರಿಗೆ ಬಟ್ಟೆಯ  ಚೀಲ  ನೀಡಲಾಯಿತು .ಅವರ ಕೈಗೆ ಒಂದು ಗುಲಾಬಿ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ  ಆಗುವ ದುಷ್ಪರಿಣಾಮಗಳ  ಮಾಹಿತಿ ನೀಡುವ ಪುಸ್ತಕ ವೊಂದನ್ನು ಅವರಿಗೆ ನೀಡಲಾಯಿತು .ಮತ್ತೆ ಮಾರುಕಟ್ಟೆಗೆ ಬರುವಾಗ ಬಟ್ಟೆ ಚೀಲವನ್ನು  ತರುವಂತೆ ತಿಳಿ ಹೇಳಲಾಯಿತು  .

ಈ ಅಭಿಯಾನ ಮುಂದಿನ ಒಂದು ತಿಂಗಳುಗಳ ಕಾಲ ನಡೆಯಲಿದೆ . ಮುಂದಿನ ಒಂದು ವಾರಗಳ ಕಾಲ ಮಂಗಳೂರಿನ ವಿವಿಧ ಮಾರುಕಟ್ಟೆ ಗಳಲ್ಲಿ  ಹಾಗೂ ಮಾಲ್  ಗಳಲ್ಲಿ ಈ ಜಾಗ್ರತಿ ಅಭಿಯಾನ  ನಡೆಯಲಿದೆ. ಅ.15 ರಿಂದ ಶಾಲೆಗಳಲ್ಲಿ  ಪ್ಲಾಸಿಕ್ ಜಾಗ್ರತಿ ಅಭಿಯಾನ ನಡೆಯಲಿದೆ. ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ದುಷ್ಪರಿಣಾಮಗಳ  ಕುರಿತು ಪ್ರಭಂದ ಸ್ಪರ್ಧೆ ನಡೆಯಲಿದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆ ಚೀಲ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ಇರುವ ಪುಸ್ತಕ ವಿತರಿಸಲಾಗುತ್ತಿದೆ  .

ಕಾರ್ಯಕ್ರಮದಲ್ಲಿ ದಕ್ಷಿಣ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ .ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರದ ಗಣೇಶ್ ನಾಯಕ್ ಹಾಜರಿದ್ದರು .

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News