ಅ.6: ಮುಸ್ಲಿಂ ಯೂತ್ ಲೀಗ್ ಸದಸ್ಯತ್ವ ಅಭಿಯಾನ ಉದ್ಘಾಟನೆ
Update: 2019-10-05 19:10 IST
ಮಂಗಳೂರು, ಅ.5: ಮುಸ್ಲಿಂ ಯೂತ್ ಲೀಗ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಮಟ್ಟದ ಸದಸ್ಯತ್ವ ಅಭಿಯಾನದ ಉದ್ಘಾಟನೆಯು ಅ.6ರಂದು ಸಂಜೆ 3ಗಂಟೆಗೆ ನಗರದ ಸೂರ್ಯ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಸಭೆಯಲ್ಲಿ ಮುಸ್ಲಿಂ ಲೀಗ್ ನಾಯಕರಾದ ಸಿ.ಅಹ್ಮದ್ ಜಮಾಲ್, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ಸಿದ್ದೀಕ್ ತಲಪಾಡಿ, ಸೈಯದ್ ಸೈಫುಲ್ಲಾ ತಂಙಳ್, ಸಿಎಲ್ ರಶೀದ್ ಹಾಜಿ ಪಾಲ್ಗೊಳ್ಳಲಿದ್ದಾರೆ ಎಂದು ಯೂತ್ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಿಳಿಸಿದ್ದಾರೆ.