ದೇರಳಕಟ್ಟೆ: ಮೂವರು ಅಂತರ್ ರಾಜ್ಯ ಕಳವು ಆರೋಪಿಗಳು ಸೆರೆ
Update: 2019-10-05 19:29 IST
ಉಳ್ಳಾಲ: ಖಚಿತ ಮಾಹಿತಿ ಮೇರೆಗೆ ಮೂವರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ದೇರಳಕಟ್ಟೆಯ ಕಾನಕರೆ ಎಂಬಲ್ಲಿ ಪೊಲೀಸರು ಬಂಧಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಘಟನೆ ವಿವರ
ಅಂತರ್ ರಾಜ್ಯ ಕಳವು ಆರೋಪಿಗಳ ತಂಡ ದೇರಳಕಟ್ಟೆ ಬಳಿ ಇದ್ದಾರೆ ಎನ್ನುವ ಮಾಹಿತಿಯನ್ನು ಬೆಂಗಳೂರು ಪೊಲೀಸರು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು ಮದಕದ ವ್ಯಕ್ತಿಯನ್ನು ಮೊದಲು ವಿಚಾರಿಸಿದ್ದಾರೆ. ಆತ ಮೊದಲು ತಾನು ಕುತ್ತಾರ್ ನಿವಾಸಿ ಎಂದಿದ್ದು, ಬಳಿಕ ಮದಕದ ನಿವಾಸಿ ಎಂದು ಒಪ್ಪಿಕೊಂಡಿದ್ದ ಎನ್ನಲಾಗಿದೆ.
ಮದಕದ ನಿವಾಸಿ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳಿಗೆ ಸಹಕಾರ ನೀಡಿದ್ದ ಎಂದು ತಿಳಿದು ಬಂದಿದೆ. ಅದೇ ವ್ಯಕ್ತಿಯನ್ನು ಮೊದಲು ಪೊಲೀಸರು ವಿಚಾರಿಸಿದ್ದು ,ಆತನಿಂದಲೇ ಮಾಹಿತಿ ಪಡೆದು ಆರೋಪಿಗಳು ಪರಾರಿಯಾಗುವ ರಸ್ತೆಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.