ಬಜಾಲ್ ನಂತೂರು: ಮಾದಕ ದ್ರವ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮ
Update: 2019-10-05 19:39 IST
ಮಂಗಳೂರು, ಅ.5: ಸುನ್ನಿ ಸ್ಟೂಡೆಂಟ್ ಫೆಡರೇಶನ್‌ನ ಮಂಗಳೂರು ಸೆಕ್ಟರ್ ವತಿಯಿಂದ ಮಾದಕದ್ರವ್ಯ ವಿರುದ್ಧ ಜನ ಜಾಗೃತಿಯ ಕಾರ್ಯಕ್ರಮವು ಬಜಾಲ್ ನಂತೂರ್ ಜಂಕ್ಷನ್‌ನಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷ ಶಾಫಿ ಮಿಸ್ಬಾಹಿ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಂಕನಾಡಿ ನಗರ ಠಾಣೆಯ ಎಎಸ್ಸೈ ಜ್ಞಾನ ಶೇಖರ್ ಜಾಥಾ ಉದ್ಘಾಟಿಸಿದರು. ಹುಸೈನ್ ಮುಹೀನ್ ಮಾರ್ನಾಡ್ ಮುಖ್ಯ ಭಾಷಣ ಮಾಡಿದರು.
ಸಭೆಯಲ್ಲಿ ಡಿವಿಜನ್ ಉಪಾಧ್ಯಕ್ಷ ಸೈಯದ್ ಇಸಾಕ್ ತಂಙಳ್ ಅಲ್ಹಾದಿ ಕಣ್ಣೂರು, ದ.ಕ. ವೆಸ್ಟ್ರೆನ್ ಜೊತೆ ಕಾರ್ಯದರ್ಶಿ ಮನ್ಸೂರ್, ಬಜಾಲ್ ಶಾಖೆಯ ಅಧ್ಯಕ್ಷ ಹಾರಿಸ್ ಬಜಾಲ್, ನವಾಝ್ ಬಝಾಲ್, ಅಬ್ದುಲ್ ರಝಾಕ್ ಕಣ್ಣೂರು, ಫೈರೋಝ್ ಪಕ್ಕಲಡ್ಕ, ಮಲಿಕ್ ಜೆಪ್ಪು ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಕ್ ಜೆಪ್ಪು ಸ್ವಾಗತಿಸಿದರು. ಮುಹಮ್ಮದ್ ರಝೀನ್ ವಂದಿಸಿದರು.