ಉಡುಪಿ ಜಿಪಂನಿಂದ 52215 ಲಕ್ಷ ರೂ. ಕ್ರಿಯಾಯೋಜನೆ ಅನುಷ್ಠಾನ
ಉಡುಪಿ, ಅ.5: ಉಡುಪಿ ಜಿಪಂಗೆ 2019-20ನೇ ಸಾಲಿನಲ್ಲಿ ಜಿಪಂ ಕಾರ್ಯಕ್ರಮಗಳಿಗೆ 18730.02 ಲಕ್ಷ ರೂ, ತಾಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ 33388.08 ಲಕ್ಷ ರೂ ಹಾಗೂ ಗ್ರಾಪಂ ಕಾರ್ಯಕ್ರಮ ಗಳಿಗೆ 97 ಲಕ್ಷ ರೂ. ಗಳ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆ ನೀಡಿದ್ದು, ಕ್ರಿಯಾ ಯೋಜನೆಯ ಕಾರ್ಯಕ್ರಮಗಳನ್ನು ಸಂಬಂದಪಟ್ಟ ಅನುಷ್ಠಾನ ಇಲಾಖೆಗಳ ಮೂಲಕ ಅನುಷ್ಠಾನಿ ಸಲಾಗುತ್ತೆದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಜಿಪಂಗೆ ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಸಾಲಿನಲ್ಲಿ ಶೇ.3.75 ರಷ್ಟು ಹೆಚ್ಚುವರಿ ಮೊತ್ತ ನಿಗದಿಯಾಗಿದ್ದು, ಕ್ರಿಯಾ ಯೋಜನೆಯಲ್ಲಿ ರಸ್ತೆ ಮತ್ತು ಕಟ್ಟಡ ವಲಯಕ್ಕೆ ಹೆಚ್ಚಿನ ಅನುದಾನ ಹಂಚಿಕೆ ಮಾಡಿದ್ದು, ಕಳೆದ ಬಾರಿಗಿಂತ ಶೇ.10ರಿಂದ 12ರಷ್ಟು ಹೆಚ್ಚು ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿ ಡಲಾಗಿದೆ ಎಂದವರು ನುಡಿದರು.
ಶಾಸನಬದ್ದ ಅನುದಾನವಾಗಿ ಜಿಪಂಗೆ 527.74 ಲಕ್ಷ, ತಾಪಂಗಳಿಗೆ 200 ಲಕ್ಷ ಮತ್ತು ಗ್ರಾಪಂಗಳಿಗೆ 10 ಲಕ್ಷ ನಿಗದಿಯಾಗಿದೆ. 14ನೇ ಹಣಕಾಸು ಆಯೋಗದ ಶಿಪಾರಸ್ಸಿನಂತೆ ಗ್ರಾಪಂಗಳಿಗೆ ಸರಕಾರದಿಂದ ಅನುದಾನ ಬಿಡುಗಡೆ ಯಾಗುತ್ತಿದ್ದು, ಈ ಅನುದಾನಕ್ಕೆ ಗ್ರಾಪಂ ಹಂತದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಜಿಪಂ ಅನುಮೋದನೆಯೊಂದಿಗೆ ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ 2019-20ನೇ ಸಾಲಿಗೆ ಉಡುಪಿ ಜಿಲ್ಲೆಗೆ ಒಟ್ಟು 32.14 ಕೋಟಿ ಅನುದಾನ ನಿಗದಿಪಡಿಸಿದ್ದು, ಅನುಷ್ಠಾನ ಕುರಿತು ನೀಡಲಾಗಿರುವ ಮಾರ್ಗಸೂಚಿಯಂತೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಒಟ್ಟು 4 ಕಾಮಗಾರಿಗಳಿಗೆ 463 ಲಕ್ಷ ರೂ. ಕ್ರಿಯಾಯೋಜನೆ ರೂಪಿಸಿದೆ. ಏಕಗ್ರಾಮ ಕುಡಿಯುವ ನೀರು ಯೋಜನೆಯಡಿ ಮುಂದುವರೆದ 170 ಕಾಮಗಾರಿಗಳಿಗೆ 620.96 ಲಕ್ಷ ಹಾಗೂ 207 ಹೊಸ ಕಾಮಗಾರಿಗಳಿಗೆ 2120.49 ಲಕ್ಷದ ಕ್ರಿಯಾಯೋಜನೆ ರೂಪಿಸಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಮುಕ್ತಾಯ ಗೊಳಿುವಂತೆ ದಿನಕರ ಬಾಬು ಸೂಚಿಸಿದರು.
ಮಿಷನ್ ಅಂತ್ಯೋದಯ ನಮ್ಮ ಗ್ರಾಮ ನಮ್ಮ ಯೋಜನೆಯಡಿ, ಗ್ರಾಮ ಮಟ್ಟದಲ್ಲಿ ಜನರ ಅಗತ್ಯತೆಗನುಗುಣವಾಗಿ ಯೋಜನೆ ರೂಪಿಸಲಾಗುತಿದ್ದು, ಗ್ರಾಮಮಟ್ಟದಲ್ಲಿ ಜನರಿಗೆ ಲ್ಯವಾಗುವ ವಿವಿಧ ಸೇವೆಗಳ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ಭರ್ತಿ ಮಾಡಬೇಕಿದ್ದು, ಇದರಲ್ಲಿ 142 ಪ್ರಶ್ನಾವಳಿ ಗಳಿದ್ದು, ಇದನ್ನು ಗ್ರಾಮಮಟ್ಟದಲ್ಲಿ ಸಂಗ್ರಹಿಸಿ ಗ್ರಾಮಸಬೆಯಲ್ಲಿ ಚರ್ಚಿಸಿ ತಂತ್ರಾಂಶದಲ್ಲಿ ಅಳವಡಿಸುವಂತೆ ಜಿಪಂ ಮುಖ್ಯ ಯೋಜಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು.
ಜಿಲ್ಲೆಯಲ್ಲಿ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಸುಮಾರು 50 ಗ್ರಾಪಂಗಳಲ್ಲಿ ಘನ ಮತ್ತು ದ್ರವ ಸಂಪನ್ಮೂಲ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಮೂಲಕ ಇದುವರೆಗೆ 3500 ಟನ್ ಹಸಿ ಕಸ ಮತ್ತು 2500 ಟನ್ ಒಣ ಕಸ ಸಂಗ್ರಹವಾಗಿದ್ದು, ಇದರ ವೈಜ್ಞಾನಿಕ ವಿಲೇವಾರಿ ಮೂಲಕ ಸುಮಾರು 70ರಿಂದ 80 ಲಕ್ಷ ರೂ ಆದಾಯ ದೊರೆಯುತ್ತಿದೆ. ಇದು ಇಡೀ ರಾಜ್ಯಕ್ಕೆ ಮಾದರಿ ಯೋಜನೆಯಾಗಿದೆ. ಇಂತಹ ಘಟಕಗಳನ್ನು ಆರಂಭಿಸಲು ಜಾಗದ ಕೊರತೆ ಇರುವ ಗ್ರಾಪಂಗಳು ತಮ್ಮ ಸಮೀಪದ ಪಂಚಾಯತ್‌ಗಳ ಜೊತೆ ಸೇರಿ ಬಹುಗ್ರಾಮ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸುವ ಯೋಜನೆ ಇದೆ. ಇದರಿಂದ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಸಂಪೂರ್ಣ ನಿವಾರಣೆ ಯಾಗಲಿದೆ ಎಂದು ಸಿಪಿಓ ಹೇಳಿದರು.
ಉಡುಪಿ ಜಿಲ್ಲೆಗೆ ಕೇಂದ್ರ ಸರಕಾರದ ಪೈಲಟ್ ಯೋಜನೆಯಾಗಿ ವರ್ಮಿ ಫಿಲ್ಟರ್ ಕಂಪೋಸ್ಟಿಂಗ್/ ಟೈಗರ್ ಶೌಚಾಲಯ ಮಂಜೂರಾಗಿದ್ದು, ಕಡ್ತಲದ 50, ಅಂಬಲಪಾಡಿಯ 10, ಹಂಗಳೂರಿನ 20, ಬಸ್ರೂರಿನ 10 ಮತುತಿ ಹೊಸಾರುವಿನ 10 ಸೇರಿದಂತೆ ಒಟ್ಟು 100 ಕುಟುಂಬಗಳಲ್ಲಿ ಅನುಷ್ಠಾನ ಮಾಡ ಲಾಗಿದೆ. ಯಶಸ್ವಿಯಾಗಿ ಕಾರ್ಯ ನಿರ್ವಹಣೆ ನಡೆಯುತ್ತಿದೆ. ಇದರಿಂದ ಶೌಚಾಲಯದ ಪಿಟ್ ಎಂದಿಗೂ ತುಂಬುವುದಿಲ್ಲ. ಅಲ್ಲದೇ ಪಿಟ್‌ನಿಂದ ಸಮೀಪದ ಬಾವಿಗಳ ನೀು ಕಲುಷಿತವಾಗುವುದಿಲ್ಲ ಎಂದರು.
ಉಡುಪಿ ಜಿಲ್ಲೆಗೆ ಕೇಂದ್ರ ಸರಕಾರದ ಪೈಲಟ್ ಯೋಜನೆಯಾಗಿ ವರ್ಮಿ ಫಿಲ್ಟರ್ ಕಂಪೋಸ್ಟಿಂಗ್/ ಟೈಗರ್ ಶೌಚಾಲಯ ಮಂಜೂರಾಗಿದ್ದು, ಕಡ್ತಲದ 50, ಅಂಬಲಪಾಡಿಯ 10, ಹಂಗಳೂರಿನ 20, ಬಸ್ರೂರಿನ 10 ಮತುತಿ ಹೊಸಾರುವಿನ 10 ಸೇರಿದಂತೆ ಒಟ್ಟು 100 ಕುಟುಂಬಗಳಲ್ಲಿ ಅನುಷ್ಠಾನ ಮಾಡ ಲಾಗಿದೆ. ಯಶಸ್ವಿಯಾಗಿ ಕಾರ್ಯ ನಿರ್ವಹಣೆ ನಡೆಯುತ್ತಿದೆ. ಇದರಿಂದ ಶೌಚಾಲಯದ ಪಿಟ್ ಎಂದಿಗೂ ತುಂಬುವುದಿಲ್ಲ. ಅಲ್ಲದೇ ಪಿಟ್‌ನಿಂದ ಸಮೀಪದ ಬಾವಿಗಳ ನೀರು ಕಲುಷಿತವಾಗುವುದಿಲ್ಲ ಎಂದರು. ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.