ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಾಣ: ದಿನಕರ ಬಾಬು
ಉಡುಪಿ, ಅ.5: ಜಿಲ್ಲೆಯ ಎಸ್‌ಎಲ್‌ಆರ್‌ಎಂ ಘಟಕಗಳಲ್ಲಿ ಸಂಗ್ರಹ ವಾಗುವ ಪ್ಲಾಸ್ಟಿಕ್‌ನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿದರೂ ಸಹ ಶೇ. 20 ರಷ್ಟು ಪ್ಲಾಸ್ಟಿಕ್ ವ್ಯರ್ಥವಾಗುತ್ತಿದೆ. ಈ ಪ್ಲಾಸ್ಟಿಕ್‌ನಿಂದ ಪ್ರಾಯೋಗಿಕವಾಗಿ ಒಂದು ಜಿಪಂ ರಸ್ತೆಯನ್ನು ನಿರ್ಮಾಣ ಮಾಡಲು ಪ್ರಯತ್ನಿ ಸುವಂತೆ ಜಿಪಂ ಪಂಚಾಯತ್‌ರಾಜ್ ಮತ್ತು ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಪಂನ ಯೋಜನಾ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಶನಿವಾರ ಮಣಿಪಾಲದ ಜಿಪಂ ಸಾಂಗಣದಲ್ಲಿನಡೆದಜಿಪಂನಯೋಜನಾಸಮಿತಿಸೆಯಲ್ಲಿ ಅವರು ಮಾತನಾಡುತಿದ್ದರು. ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಿಸಿದ ಹಲವು ನಿದರ್ಶನಗಳು ಇವೆ. ಹೈದರಾ ಬಾದಿನಲ್ಲಿ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಿಸುವ ಸಂಸ್ಥೆ ಇದ್ದು, ಈ ಸಂಸ್ಥೆಗೆ ಜಿಲ್ಲೆಯ ಅಧಿಕಾರಿಗಳ ತಂಡ ತೆರಳಿ ಅಧ್ಯಯನ ಮಾಡಿ ಬರುವಂತೆ ತಿಳಿಸಿದ ದಿನಕರ ಬಾಬು, ನಂತರ ಅದನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ ಎಂದು ಹೇಳಿದರು.
ಜಿಲ್ಲೆಯ ಒತ್ತಿನೆಣೆಯಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಅತ್ಯಂತ ಪ್ರಶಸ್ತವಾದ ಸ್ಥಳವಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಸದಸ್ಯ ಜನಾರ್ಧನ ತೋನ್ಸೆ ಹೇಳಿದರು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ದಿನಕರ ಬಾಬು ಹೇಳಿದರು.
ಜಿಲ್ಲೆಯಲ್ಲಿ ಅಂರ್ತಜಲ ಮಟ್ಟ ಏರಿಸುವ ಕುರಿತಂತೆ ಎಲ್ಲಾ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ, ವಸತಿರಹಿತರಿಗೆ ನಿವೇಶನ ಗುರುತಿಸುವಂತೆ ಮತ್ತು ನಿವೇಶನ ಪಡೆದು ಹಲವು ವರ್ಷಗಳಾದರೂ ಅಲ್ಲಿ ಮನೆ ಕಟ್ಟದವರಿಗೆ ನೋಟೀಸ್ ನೀಡಿ, ನಿಗದಿತ ಅವಧಿಯೊಳಗೆ ಮನೆ ನಿರ್ಮಿಸದವರಿಂದ, ಈ ನಿವೇಶನವನ್ನು ಹಿಂಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ದಿನಕರ ಬಾಬು ಸೂಚಿಸಿದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಉಪ ಕಾರ್ಯ ದರ್ಶಿ ಕಿರಣ್ ಪೆಢ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.