×
Ad

ಆಸ್ಟ್ರೇಲಿಯದ ದಂಪತಿಯನ್ನು ಬಿಡುಗಡೆ ಮಾಡಿದ ಇರಾನ್

Update: 2019-10-05 20:51 IST

ಸಿಡ್ನಿ, ಅ. 5: ಕಳೆದ ತಿಂಗಳು ಇರಾನ್‌ನಲ್ಲಿ ಬಂಧಿಸಲ್ಪಟ್ಟಿದ್ದ ಆಸ್ಟ್ರೇಲಿಯದ ದಂಪತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಸ್ಟ್ರೇಲಿಯದ ವಿದೇಶ ಸಚಿವೆ ಮ್ಯಾರಿಸ್ ಪೇನ್ ಶನಿವಾರ ಹೇಳಿದ್ದಾರೆ.

ಪರ್ತ್ ನಿವಾಸಿಗಳಾದ ಜೋಲೀ ಕಿಂಗ್ ಮತ್ತು ಮಾರ್ಕ್ ಫಿರ್ಕಿನ್ ಎರಡು ವರ್ಷಗಳಿಂದ ಆಸ್ಟ್ರೇಲಿಯದಿಂದ ಬ್ರಿಟನ್‌ವರೆಗೆ ಪ್ರವಾಸ ಕೈಗೊಂಡಿದ್ದು, ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ದಾಖಲಿಸುತ್ತಿದ್ದರು. ಆದರೆ, ಕಿರ್ಗಿಸ್ತಾನ್ ಮತ್ತು ಪಾಕಿಸ್ತಾನಗಳ ತಮ್ಮ ಅನುಭವಗಳನ್ನು ಹಂಚಿಕೊಂಡ ಬಳಿಕ, ಸುಮಾರು ಮೂರು ತಿಂಗಳುಗಳಿಂದ ಮೌನವಾಗಿದ್ದರು.

ಅನುಮತಿಯಿಲ್ಲದೆ ಡ್ರೋನೊಂದನ್ನು ಹಾರಿಸಿದ್ದಕ್ಕಾಗಿ ದಂಪತಿಯನ್ನು ಇರಾನ್‌ನಲ್ಲಿ ಬಂಧಿಸಲಾಗಿತ್ತು.

ಟೆಹರಾನ್‌ನ ಅಧಿಕಾರಿಗಳೊಂದಿಗೆ ‘ಅತ್ಯಂತ ಸೂಕ್ಷ್ಮ ಮಾತುಕತೆಗಳನ್ನು’ ನಡೆಸಿದ ಬಳಿಕ, ದಂಪತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪೇನ್ ಶನಿವಾರ ತಿಳಿಸಿದರು.

‘‘ಅವರು ಆಸ್ಟ್ರೇಲಿಯಕ್ಕೆ ವಾಪಸ್ ಬರುತ್ತಿದ್ದಾರೆ ಹಾಗೂ ತಮ್ಮ ಕುಟುಂಬವನ್ನು ಸೇರಲಿದ್ದಾರೆ’’ ಎಂದು ಸಿಡ್ನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ತಿಳಿಸಿದರು.

‘‘ಅವರು ಉತ್ತಮ ಮನೋಸ್ಥೈರ್ಯವನ್ನು ಹೊಂದಿದ್ದಾರೆ ಹಾಗೂ ಉತ್ತಮ ಆರೋಗ್ಯದಲ್ಲಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News