ಸುಲ್ತಾನ್ ಗೋಲ್ಡ್ ‘ವಿಶ್ವವಜ್ರ’ ಪ್ರದರ್ಶನಕ್ಕೆ ಭೇಟಿ
Update: 2019-10-05 22:02 IST
ಉಡುಪಿ, ಅ.5: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಮಳಿಗೆಯಲ್ಲಿ ಆಯೋಜಿಸಿರುವ ‘ವಿಶ್ವವಜ್ರ’ ವಜ್ರಾಭರಣಗಳ ಪ್ರದರ್ಶನಕ್ಕೆ ಉಡುಪಿ ತುಳು ಕೂಟದ ಸದಸ್ಯರು ಇತ್ತೀಚೆಗೆ ಭೇಟಿ ನೀಡಿ ಶುಭಹಾರೈಸಿದರು.
ಪ್ರದರ್ಶನದಲ್ಲಿರುವ ದೇಶ ವಿದೇಶಗಳ ವೈವಿಧ್ಯಮಯ ವಜ್ರಾಭರಣಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಉಡುಪಿ ಮಳಿಗೆಯ ಮುಖ್ಯಸ್ಥ ಅಜ್ಮಲ್ ಸ್ವಾಗತಿಸಿದರು. ಸೇಲ್ಸ್ ಮೆನೇಜರ್ ಇಕ್ಬಾಲ್, ಮಾರ್ಕೇಟಿಂಗ್ ಮೆನೇಜರ್ ಶಿಹಾಬುದ್ದೀನ್ ಉಪಸ್ಥಿತರಿ ದ್ದರು. ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.