ಪ್ರತಿಫಲ ಅಪೇಕ್ಷಿಸದ ಕೆಲಸಗಳು ಅಮರ: ಉಡುಪಿ ಬಿಷಪ್

Update: 2019-10-05 16:34 GMT

ಶಿರ್ವ, ಅ.5: ಪ್ರತಿಫಲ ಅಪೇಕ್ಷಿಸದೇ ಮಾಡುವ ಕೆಲಸಗಳು ಶಾಶ್ವತವಾಗಿ ಸಮಾಜದಲ್ಲಿ ಅಮರವಾಗಿ ಉಳಿಯುತ್ತದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ವತಿ ಯಿಂದ ನವೀಕರಿಸಲ್ಪಟ್ಟ ದಿ.ವಂ.ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಶನಿವಾರ ಆಶೀರ್ವಚನ ನೀಡಿದರು.

ಸಭಾಂಗಣವನ್ನು ಉದ್ಘಾಟಿಸಿದ ನಿಟ್ಟೆ ಮಹಾವಿದ್ಯಾಲಯದ ಕುಲಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ ಅಮರವಾದುದು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಲಭಿಸುವ ಶಿಸ್ತುಭರಿತ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾನವನಾಗಿ ಬದುಕಲು ಸಹಾಯ ಮಾಡಿದೆ. ವಿದ್ಯಾರ್ಥಿ ಶಿಕ್ಷಣ ಪಡೆದು ಸಭ್ಯ ನಾಗರಿಕನಾಗಿ ಬದುಕಿದಾಗ ಆತನ ಮುಂದಿನ ಜೀವನ ಸಾಕಾರವಾಗುತ್ತದೆ ಎಂದರು.

ಸಂತ ಮೇರಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ.ಡೆನಿಸ್ ಡೆಸಾ ಮಾತನಾಡಿ, ಪರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದಾಗ ಪ್ರತಿಯೊಬ್ಬ ಮಾನವ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ತನ್ನಿಂದ ತಾನೇ ಏರುತ್ತಾನೆ. ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಹೆಚ್ಚು ಹೆಚ್ಚು ಉತ್ತಮ ಕೆಲಸಗಳು ಸಮಾಜದಲ್ಲಿ ನಡೆಯಲು ಸಾಧ್ಯ ಎಂದು ತಿಳಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಸಲಹೆ ಗಾರ ಪ್ರೊ.ರೊನಾಲ್ಡ್ ಜೆ.ಮೊರಾಸ್ ದಿ.ವಂ.ಹೆನ್ರಿ ಕ್ಯಾಸ್ತಲಿನೊ ಅವರಿಗೆ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಭಾಂಗಣದ ನಿರ್ಮಾಣಕ್ಕೆ ಸಹಕರಿಸಿ ದವರನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜನ್ ವಿ.ಎನ್., ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ.ಮಹೇಶ್ ಡಿಸೋಜ, ಚರ್ಚಿನ ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ಹಾ ಮೊದಲಾದವರು ಉಪಸ್ಥಿತರಿ ದ್ದರು. ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ್ ಸ್ವಾಗತಿಸಿದರು. ಜಗದೀಶ್ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News