ವೃದ್ಧ ನಾಪತ್ತೆ
Update: 2019-10-05 22:14 IST
ಉಡುಪಿ, ಅ.5: ಕಾರ್ಕಳ ತಾಲೂಕು ಸೂಡ ಗ್ರಾಮದ ಪೊಕ್ಕಿಹಿತ್ಲು ಮನೆ ನಿವಾಸಿ ಜಯರಾಮ ಶೆಟ್ಟಿ (75) ಎಂಬವರು ಸೆ.30ರಂದು ಊರಿನಲ್ಲಿ ಕೆಲಸ ಇದೆ ಎಂದು ಹೇಳಿ ಹೋದವರು ಈವರೆಗೆ ವಾಪಸ್‌ಬಾರದೇ ಕಾಣೆಯಾಗಿದ್ದಾರೆ.
ಇವರು ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು, ಹಿಂದಿ ಬಾಷೆ ಬಲ್ಲವರಾಗಿದ್ದಾರೆ. ಇವರ ಪತ್ತೆಯಾದಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.